Publish Date: Friday, 27 October 2023 (16:00 IST)
Updated Date: Friday, 27 October 2023 (16:09 IST)
ಬೆಂಗಳೂರು ಜಿಲ್ಲೆಗೆ ಕನಕಪುರ ಸೇರಿಸುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, 4 ಬಾರಿ ಸಾತನೂರು, 4 ಬಾರಿ ಕನಕಪುರ ಕ್ಷೇತ್ರ ಪ್ರತಿನಿಧಿಸಿದ್ದೀರಿ. ಇಷ್ಟಾದರೂ ನಿಮ್ಮ ಕ್ಷೇತ್ರ ಅಭಿವೃದ್ಧಿ ಆಗಿಲ್ಲ. ಡಿ.ಕೆ.ಶಿವಕುಮಾರ್ಗೆ ಇಷ್ಟು ವರ್ಷವಿಲ್ಲದ ಪರಿಜ್ಞಾನ ಈಗ ಬಂತಾ? ಎಂದು ಕಿಡಿಕಾರಿದ್ರು. ರಾಮನಗರಕ್ಕೆ ಹಲವರ ಕೊಡುಗೆ ಇದೆ. ಡಿ.ಕೆ.ಶಿವಕುಮಾರ್ ರಾಮದೇವರ ಬೆಟ್ಟಕ್ಕೆ ಒಂದು ಕಲ್ಲೂ ಎತ್ತಿಟ್ಟಿಲ್ಲ. ರಾಮನಗರಕ್ಕೆ ಮೋದಿ ಕೊಡುಗೆ ಅಪಾರ, ನಿಮ್ಮ ಕೊಡುಗೆ ಏನಿಲ್ಲ ಎಂದರು.