Publish Date: Thu, 26 Oct 2023 (15:40 IST)
Updated Date: Thu, 26 Oct 2023 (17:47 IST)
ನಿಮ್ಮನ್ನು ಅಧಿಕಾರದಿಂದ ಇಳಿಸಿದವರ ಜೊತೆ ಸೇರಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಮೀರ್‌ಸಾಧಿಕ್ ಎನ್ನುತ್ತಿದ್ದೀರಲ್ಲ. ಮಾಧ್ಯಮಗಳ ಎದುರು ಮಾಡುವ ಟೀಕೆಗಳು ಸಾಯುತ್ತವೆ.
ಬನ್ನಿ ಕುಮಾರಣ್ಣ ನಿಜವಾದ ಮೀರ್ ಸಾಧಿಕ್ ಯಾರು ಎಂಬುದನ್ನು ಸದನದಲ್ಲೇ ಚರ್ಚೆ ಮಾಡೋಣ. ಎಲ್ಲವೂ ದಾಖಲೆಗಳಲ್ಲಿ ಉಳಿಯಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಮಾರಸ್ವಾಮಿ ಅವರಿಗೆ ಪಂಥಾಹ್ವಾನ ನೀಡಿದ್ದಾರೆ.