Publish Date: Tue, 16 May 2023 (16:01 IST)
Updated Date: Tue, 16 May 2023 (15:51 IST)
ಕಾಂಗ್ರೆಸ್ ಗ್ಯಾರಂಟಿಗೆ ಷರತ್ತುಗಳ ವಿಚಾರವಾಗಿ ಮಾಜಿ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದು,ಆಗ ಗ್ಯಾರಂಟಿ ಕೊಟ್ಟೇ ಕೊಡ್ತೀವಿ ಅಂತ ಹೇಳಿದ್ರು.ಈಗ ಪರಮೇಶ್ವರ್ ಅವರು ಕಂಡೀಷನ್ಸ್ ಅಪ್ಲೈ ಅಂತ ಸ್ಟಾರ್ ಮಾರ್ಕ್ ಹಾಕಿದ್ದಾರೆ.ಆಗ ನನಗೂ ಸಿಗುತ್ತೆ, ನಿನಗೂ ಸಿಗುತ್ತೆ.ನನಗೂ ಭಾಗ್ಯ, ನಿನಗೂ ಭಾಗ್ಯ ಅಂತ ಸಿದ್ದರಾಮಯ್ಯ, ಶಿವಕುಮಾರ್ ಹೇಳಿದ್ರು.ಸ್ಪಷ್ಟತೆಯಿಂದ ಎಲ್ಲರಿಗೂ ಮಾತು ಕೊಟ್ಟಿದಾರೆ.200 ಯೂನಿಟ್ ಕರೆಂಟ್ ಫ್ರೀ,2000 ಫ್ರೀ, ನಿರುದ್ಯೋಗ ಭತ್ಯೆ ಅಂತ ಹೇಳಿದ್ರು.ಎಲ್ಲರಿಗೂ ಕೊಡಲಿ ಅಂತಾ ಅಶ್ವಥ್ ನಾರಾಯಣ್ ಹೇಳಿದ್ರು.
ಹಳ್ಳಿಗಳಲ್ಲಿ ಕರೆಂಟ್ ಬಿಲ್ ಕಟ್ಟದ ವಿಚಾರವಾಗಿಯೂ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದು,ಇವರು ಹೇಳಿರೋದನ್ನ ಜನ ಪಾಲಿಸ್ತಿದ್ದಾರೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕರೆಂಟ್ ಬಿಲ್ ಕಟ್ಟಂಗಿಲ್ಲ ಅಂತ ಹೇಳಿದಾರೆ ಅದಕ್ಕೆ ಕಟ್ಟುತ್ತಿಲ್ಲ.ನಾವು ಇದನ್ನ ಅಸ್ತ್ರ ಮಾಡಿಕೊಂಡಿಲ್ಲ.ಅವರು ಹೇಳಿದ್ದಾರೆ, ಇವರು ಕಟ್ಟಲ್ಲ ಅಂತಿದ್ದಾರೆ.ವಿಪಕ್ಷ ನಾಯಕ ನೇಮಕ ಹಾಗೂ ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವ ವಿಚಾರವಾಗಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ.ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅಶ್ವಥ್ ನಾರಾಯಣ್ ಹೇಳಿದ್ರು.