Publish Date: Mon, 02 May 2022 (19:30 IST)
Updated Date: Mon, 02 May 2022 (19:33 IST)
ಇಂದು ರಾತ್ರಿ ಕೇಂದ್ರ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಲಿದ್ದಾರೆ. ರೇಸ್ ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಶಾ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಖಾಸಗಿ ಹೋಟೆಲ್ನಲ್ಲೇ ಸಭೆ ನಡೆಸಲಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಿಂದ ಹೋಟೆಲ್ಗೆ ಸಭೆ ಶಿಫ್ಟ್ ಆಗಿದೆನಾಳೆ ಮಧ್ಯಾಹ್ನ ಸಿಎಂ ಅಧಿಕೃತ ನಿವಾಸದಲ್ಲಿ ಭೋಜನ ನಂತರ ರಾಜ್ಯ ಬಿಜೆಪಿ ಕೋರ್ಕಮಿಟಿ ಸದಸ್ಯರ ಜೊತೆ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆಯ ಭಾಗವಾಗಿ ಚರ್ಚಿಸಲಿದ್ದಾರೆ.
ಇನ್ನು ಮತ್ತೊಂದು ಕಡೆ ದೆಹಲಿಯಿಂದ ಇಂದು ಸಂಜೆ ಬೆಂಗಳೂರಿಗೆ ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಲಿದ್ದಾರೆ. ಹಾಗೂ ರೇಸ್ಕೋರ್ಸ್ ರಸ್ತೆ ಹೋಟೆಲ್ನಲ್ಲಿ ನಡೆಯುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
geetha
Publish Date: Mon, 02 May 2022 (19:30 IST)
Updated Date: Mon, 02 May 2022 (19:33 IST)