ಬೆಂಗಳೂರಲ್ಲಿ ಪುಂಡರ ಅಟ್ಟಹಾಸ ಮುಂದುವರೆದಿದೆ. ಅನ್ಯ ಧರ್ಮದ ಮುಖಂಡರು ಇನ್ನೊಂದು ಧರ್ಮದ ಕುರಿತು ವಿರೋಧಿ ಹೇಳಿಕೆ ಹಿನ್ನೆಲೆ ಸಂಗೀತ ಬೆರೆಸಿ ಲಾಂಗ್, ಮಚ್ಚುಗಳನ್ನು ಹಿಡಿದು ನಡುರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ರಸ್ತೆಯಲ್ಲಿ ಲಾಂಗು, ಮಚ್ಚು ಹಿಡಿದು ಡಿಜೆ ಹಾಕಿ ಕೆಲ ಯುವಕರು ಡ್ಯಾನ್ಸ್ ಮಾಡದ್ರು. ಬೆಂಗಳೂರಿನ ಸೋಮೇಶ್ವರನಗರದಲ್ಲಿ ಈ ಘಟನೆ ನಡೆದಿದೆ. ಸಿದ್ದಾಪುರ ಪೊಲೀಸರು 19 ಜನರನ್ನು ಈ ಪ್ರಕರಣದಲ್ಲಿ ಬಂಧಿಸಿದ್ದಾರೆ. 14 ಅಪ್ರಾಪ್ತ ಬಾಲಕರು, 5 ಯುವಕರು ಅರೆಸ್ಟ್ ಆಗಿದ್ದಾರೆ.