ರಾಜ್ಯದಲ್ಲಿ ಮತ್ತೆ ಹೆಲ್ತ್ ಎಮರ್ಜೆನ್ಸಿ ಎದುರಾಗುತ್ತಾ ಎಂಬ ಪ್ರಶ್ನೆ ಕಾಡ್ತಿದೆ. ನಿನ್ನೆ ರಾತ್ರಿಯಿಂದ 108 ಆ್ಯಂಬುಲೆನ್ಸ್ ಮತ್ತೆ ಸಮಸ್ಯೆಯಾಗಿದ್ದು, 108ಕ್ಕೆ ಕರೆ ಮಾಡಿದ್ರೆ ರೆಸ್ಪಾನ್ಸ್ ಸಿಗ್ತಿಲ್ಲ. ಕರೆ ಮಾಡಿದ್ರೂ ಸಹ ಸಿಬ್ಬಂದಿ ಫೋನ್ ಪಿಕ್ ಮಾಡ್ತಿಲ್ಲ. ಮತ್ತೆ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ರಾತ್ರಿ 9 ಗಂಟೆಯಿಂದ ಆ್ಯಂಬುಲೆನ್ಸ್ ಸೇವೆ ವ್ಯತ್ಯಯವಾಗಿದೆ. ವೇತನ ಸಮಸ್ಯೆ ಹಿನ್ನೆಲೆಯಲ್ಲಿ ಕಂಟ್ರೋಲ್ ರೂಮಂನಲ್ಲಿ ನೌಕರರ ಕೊರತೆ ಉಂಟಾಗಿ ಈ ಸಮಸ್ಯೆ ತಲೆದೋರಿದೆ ಎಂದು ಹೇಳಲಾಗ್ತಿದೆ. ವೇತನ ನೀಡದಿದ್ದಕ್ಕೆ ನೌಕರರು ಕರ್ತವ್ಯಕ್ಕೆ ಹಾಜರಾಗ್ತಿಲ್ಲ. 108ಕ್ಕೆ ದಿನಕ್ಕೆ 20 ಸಾವಿರ ಕರೆಗಳು ಬರ್ತಿದ್ವು. ಆ್ಯಂಬುಲೆನ್ಸ್ ಸಮಸ್ಯೆಯಿಂದಾಗಿ ಈಗ ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.