Select Your Language

Notifications

webdunia
webdunia
webdunia
webdunia

ಮೆಟ್ರೋದಿಂದ ತಪ್ಪಿದ ಮತ್ತೊಂದು ಅನಾಹುತ!

ಮೆಟ್ರೋ
ಬೆಂಗಳೂರು : ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ದುರ್ಮರಣಕ್ಕೀಡಾದ ಘಟನೆ ನಡೆದ ಬಳಿಕವೂ ಒಂದಲ್ಲ ಒಂದು ಅವಘಡಗಳು ನಡೆಯುತ್ತಲೇ ಇರುತ್ತವೆ. ಇದೀಗ ಮೆಟ್ರೋದಿಂದ ಮತ್ತೊಂದು ದುರಂತ ತಪ್ಪಿದೆ.
 
ಕಬ್ಬಿಣದ ಪೀಸ್ ಬಿದ್ದು ಕಾರಿನ ಕ್ಲಾಸ್ ಜಖಂ ಆದ ಘಟನೆ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೇಟ್ರೋ ಸ್ಟೇಷನ್ ಕೆಳಗೆ ನಡೆದಿದೆ. ರಿತೇಶ್ ಎಂಬವರು ತಮ್ಮ ಕಾರಿನಲ್ಲಿ ಹೋಗುತ್ತಿದ್ದರು.

ಕಾರು ಮೇಟ್ರೋ ಸ್ಟೇಷನ್ ಕೆಳಗೆ ಬರುತ್ತಿದ್ದಂತೆಯೇ ಕಬ್ಬಿಣದ ಪೀಸ್ ಕಾರಿನ ಗ್ಲಾಸ್ ಮೇಲೆ ಬಿದ್ದಿದೆ. ಪೀಸ್ ಬಿದ್ದ ರಭಸಕ್ಕೆ ಕಾರಿನ ಗಾಜು ಕೂಡ ಪೀಸ್ ಪೀಸ್ ಆಗಿದೆ.

ಘಟನೆ ನಡೆದ ಬಳಿಕ ಕಬ್ಬಿಣದ ಪೀಸ್ ಎಲ್ಲಿಂದ ಬಿತ್ತು ಅನ್ನೋ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮೇಟ್ರೋ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ಆಗಿದೆ ಎಂದು ಇದೀಗ ಕಾರಿನ ಮಾಲೀಕ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ತೆಯನ್ನೇ ಚಾಕುವಿನಿಂದ ಇರಿದು ಕೊಲೆಗೈದ ಅಳಿಯ!