Publish Date: Sat, 25 Feb 2023 (11:58 IST)
Updated Date: Sat, 25 Feb 2023 (12:08 IST)
ಬೆಂಗಳೂರು : ರಾಜ್ಯ ಬಿಜೆಪಿ ನಾಯಕರಿಗೆ ಗೃಹ ಸಚಿವ ಅಮಿತ್ ಶಾ ಬಿಗ್ ಶಾಕ್ ನೀಡಿದ್ದಾರೆ. ಬಳ್ಳಾರಿಯ ಸಂಡೂರಿನ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ಬಂದಿಳಿದ ಅಮಿತ್ ಶಾ ಸರಣಿ ಸಭೆ ನಡೆಸಲು ಮುಂದಾಗಿದ್ದರು.
ಆದರೆ ಅಮಿತ್ ಶಾ ಮಾತ್ರ ಸಭೆಯಿಂದ ದೂರ ಉಳಿದು ಶಾಸಕರು ಹಾಗೂ ಸಂಸದರಿಗೆ ಅಚ್ಚರಿ ಮೂಡಿಸಿದರು. ಗುರುವಾರ ಬೆಂಗಳೂರು ಶಾಸಕರು, ಸಂಸದರು, ಪರಿಷತ್ ಸದಸ್ಯರೊಂದಿಗೆ ಬೆಂಗಳೂರು ಕೇಂದ್ರಿತ ಮಹತ್ವದ ಸಭೆ ಆಯೋಜಿಸಲಾಗಿತ್ತು.
ಬೆಂಗಳೂರು ಟಾಸ್ಕ್ ಬಗ್ಗೆ ಅಮಿತ್ ಶಾ ಕ್ಲಾಸ್ಗೆ ನಾಯಕರು ಕುತೂಹಲ ಇಟ್ಟುಕೊಂಡಿದ್ದರು. ಆದರೆ ಎಲ್ಲವೂ ಉಲ್ಟಾ ಆಗಿತ್ತು. ಸಭೆಯಿಂದ ಅಮಿತ್ ಶಾ ದೂರ ಉಳಿದಿದ್ದರು. ಇದು ಶಾಸಕರು, ಸಂಸದರಿಗೆ ಅಚ್ಚರಿ ಜೊತೆಗೆ ಗೊಂದಲವೂ ಉಂಟಾಯಿತು.
ಅಮಿತ್ ಶಾ ಗೈರಿನ ನಡುವೆ ರಾಜ್ಯ ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ, ಮನ್ಸುಖ್ ಮಾಂಡವೀಯ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಬೆಂಗಳೂರು ನಗರದ ಶಾಸಕರು, ಸಂಸದರು, ಪರಿಷತ್ ಸದಸ್ಯರು, ಜಿಲ್ಲಾ ಘಟಕಗಳ ಅಧ್ಯಕ್ಷರು, ಪಕ್ಷದ ಜಿಲ್ಲಾ ಉಸ್ತುವಾರಿಗಳು ಭಾಗಿಯಾಗಿದ್ದರು.