Publish Date: Sun, 26 Mar 2023 (07:42 IST)
Updated Date: Sun, 26 Mar 2023 (07:11 IST)
ಮೋದಿ ರೋಡ್ ಶೋ ಭದ್ರತಾ ಲೋಪಾ ಸಂಬಂಧ ಮಾತನಾಡಿದ ಎಸ್ ಪಿ ರಿಷ್ಯಂತ್, ಮೋದಿಯವರ ರೋಡ್ ಶೋ ನಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ.
ಬ್ಯಾರಿಕೇಡ್ ಬಿದ್ದ ಹಿನ್ನೆಲೆ ತಳ್ಳಾಟದಿಂದ ಯುವಕ ಮುಂದೆ ಬಂದಿದ್ದಾನೆ. ಮೋದಿಯವರಿಗೂ ಆ ಯುವಕನಿಗೂ 20 ಅಡಿ ಅಂತರವಿತ್ತು. ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ವಿಜಯಸಂಕಲ್ಪ ಮಾಹಸಂಗಮದಲ್ಲಿ ವೇದಿಕೆಯತ್ತ ನುಗ್ಗಲು ಬಂದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ವೇದಿಕೆಯತ್ತ ಧಾವಿಸಲು ಅಗಮಿಸಿದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ವೇದಿಕೆ ಸುತ್ತಲು ಎಲ್ಲಾ ದ್ವಾರಬಾಗಿಲು ಬಂದ್ ಮಾಡಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಶೌಚಾಲಯಕ್ಕೆ ತೆರಳಲು ಸಹ ಬಿಡದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಯಿತು.