Select Your Language

Notifications

webdunia
webdunia
webdunia
webdunia

ರ್ಯಾಲಿ ವೇಳೆ ಮೋದಿಗೆ ಭದ್ರತಾ ಲೋಪ !

ಬಾವ್ಲಾ
ಗಾಂಧೀನಗರ : ಗುಜರಾತ್ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬ್ಯುಸಿ ಇದ್ದಾರೆ. ಈ ಹೊತ್ತಲ್ಲೇ ಅವರ ಭದ್ರತೆ ವಿಚಾರದಲ್ಲಿ ಲೋಪ ಉಂಟಾಗಿದೆ.

ಅಹಮದಾಬಾದ್ ಜಿಲ್ಲೆಯ ಬಾವ್ಲಾದಲ್ಲಿ ಇಂದು ಸಂಜೆ ನಡೆದ ರ್ಯಾಲಿಯಲ್ಲಿ ಮೋದಿ ಭಾಷಣದ ವೇಳೆಯೇ, ನಿಷೇಧಿತ ಪ್ರದೇಶದಲ್ಲಿ ಹಾರಿದ ಡ್ರೋನ್ ಕ್ಯಾಮೆರಾ ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು. ಕೂಡಲೇ ಎಚ್ಚೆತ್ತ ಎನ್ಎಸ್ಜಿ, ಡ್ರೋನ್ ಕ್ಯಾಮೆರಾವನ್ನು ಹೊಡೆದುರುಳಿಸಿದೆ. 

ಈ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಗಳನ್ನು ನಿಖಿಲ್ ಪಾರ್ಮರ್, ರಾಕೇಶ್ ಭಾರ್ವಾದ್, ರಾಕೇಶ್ ಕುಮಾರ್ ಪ್ರಜಾಪತಿ ಎಂದು ಗುರುತಿಸಲಾಗಿದೆ.

ಮೂವರು ಅಹಮದಾಬಾದ್ನ ಓಧವ್ ನಿವಾಸಿಗಳಾಗಿದ್ದಾರೆ. ಐಪಿಸಿ ಸೆಕ್ಷನ್ 188ರ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಲು ಮುಂದಾಗಿದ್ದಾರೆ. ಈ ಸಂಬಂಧ ಹಲವು ಸಂಸ್ಥೆಗಳು ಏಕಕಾಲದಲ್ಲಿ ಸಮಗ್ರ ತನಿಖೆ ನಡೆಸಿವೆ. 


Share this Story:

Follow Webdunia kannada

ಮುಂದಿನ ಸುದ್ದಿ

ಮಿಲ್ಮಾ ಹಾಲಿನ ದರ ಲೀಟರ್ಗೆ 6 ರೂ. ಏರಿಕೆ!