Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
2023ರ ಚುನಾವಣೆಗೂ ಮುನ್ನ ಬಿಜೆಪಿ ಪಕ್ಷಕ್ಕೆ ಸಚಿವ ಆನಂದ್ ಸಿಂಗ್ ಟಕ್ಕರ್ ಕೊಟ್ಟಿದ್ದಾರೆ. ಪರಿಸರ ಖಾತೆ ನೀಡಿದ್ದಕ್ಕೆ ಆನಂದ್ ಸಿಂಗ್ ತೀವ್ರ ಬೇಸರ ವ್ಯಕ್ತಪಡಿಸಿದ್ರು. ಅಷ್ಟೇ ಅಲ್ಲ ಬೊಮ್ಮಾಯಿ ಮನವೊಲಿಕೆ ನಂತರ ಒಲ್ಲದ ಮನಸ್ಸಿನಿಂದ ಖಾತೆಯನ್ನು ವಹಿಸಿಕೊಂಡಿದ್ರು.
ನಗರ ಸಭೆ ಚುನಾವಣೆಯ ತಮ್ಮ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡದೆ ತಮಗೆ ಅನುಕೂಲವಾಗುವ ಅಭ್ಯರ್ಥಿಗಳನ್ನು ಪಕ್ಷೇತರಾಗಿ ನಿಲ್ಲಿಸಿ, ಗೆಲುವು ಸಾಧಿಸಿ ತೋರಿಸಿದ್ದಾರೆ. ಇನ್ನು 13 ಮಂದಿ ಪಕ್ಷೇತರ ಅಭ್ಯರ್ಥಿಗಳನ್ನು ಗೆಲಿಸುವುದರ ಮೂಲಕ ರಾಜ್ಯ ಹಾಗೂ ಕೇಂದ್ರ ನಾಯಕರಿಗೆ ಸಂದೇಶ ರವಾನಿಸಿದ್ದಾರೆ