Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನ್ಯೂ ಇಯರ್ ಸೆಲೆಬ್ರೆಷನ್ ವಾಹನ ಸೀಜ್

ನ್ಯೂ ಇಯರ್ ಸೆಲೆಬ್ರೆಷನ್ ವಾಹನ ಸೀಜ್
ಬೆಂಗಳೂರು , ಶನಿವಾರ, 1 ಜನವರಿ 2022 (14:12 IST)
ರಾಜಧಾನಿ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಹಿನ್ನೆಲೆ ನಗರದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ಪೊಲೀ ಸರು ಜಪ್ತಿ ಮಾಡಿದ್ದಾರೆ. ಓಮಿಕ್ರಾನ್ ನಿಯಂತ್ರಣದ ಹಿನ್ನೆಲೆ 10 ದಿನಗಳ ಕಾಲ ರಾತ್ರಿ ಕರ್ಫ್ಯೂ ವಿಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಡಿಸೆಂಬರ್ 28 ರಿಂದ ಜನವರಿ 1 ರ ಬೆಳ್ಳಿಗ್ಗಿನ ಜಾವದ ತನಕ ಬರೋಬ್ಬರಿ 318 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ನಗರದ ಪಶ್ಚಿಮ ವಿಭಾಗದಲ್ಲಿ 104 ದ್ವಿಚಕ್ರ ವಾಹನ,
 
6 ಆಟೋಗಳು, 3 ಕಾರುಗಳನ್ನು ಜಪ್ತಿ ಮಾಡಲಾಗಿದ್ದು, ಉತ್ತರ ವಿಭಾಗದಲ್ಲಿ 12 ದ್ವಿಚಕ್ರ ವಾಹನ, 3 ಆಟೋಗಳು, 17 ಕಾರುಗಳು, ಅದರಂತೆ ಈಶಾನ್ಯದಲ್ಲಿ 48 ದ್ವಿಚಕ್ರ ವಾಹನ, 1 ಆಟೋ, 8 ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಕರ್ಫ್ಯೂ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿತ್ತು. ಹೀಗಾಗಿ ನಗರದ ಸುತ್ತ ಪೊಲೀಸರು ಹೆಚ್ಚಿನ ಬಂದೋಬಸ್ತ್ ಕೈಗೊಂಡಿದ್ದರು ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿದ ಮತ್ತಿನಲ್ಲಿ ಚುಡಾಯಿಸಿದ ಯುವಕನಿಗೆ ಬಿತ್ತು ಗೂಸಾ