Publish Date: Tue, 25 Apr 2023 (11:04 IST)
Updated Date: Tue, 25 Apr 2023 (11:01 IST)
ಹುಬ್ಬಳ್ಳಿ : ಟಿಕೆಟ್ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಕೇಂದ್ರ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ರೋಡ್ ಶೋ ವೇಳೆ ಮಾತನಾಡಿದ ಅವರು, ಶೆಟ್ಟರ್ ಹೋಗಿದ್ರಿಂದ ಪಕ್ಷಕ್ಕೇನು ನಷ್ಟವಿಲ್ಲ. ಸ್ವತಃ ಶೆಟ್ಟರ್ ಸೋಲ್ತಾರೆ. ಬಿಜೆಪಿ ತನ್ನದೇ ಆದ ಮತ ಬ್ಯಾಂಕ್ ಹೊಂದಿದೆ. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯವಾಗಿದೆ. ಶೆಟ್ಟರ್ ಒಬ್ಬರನ್ನು ಮಾತ್ರವಲ್ಲ, ಅನೇಕರನ್ನು ಕೈಬಿಡಲಾಗಿದೆ. ಲಿಂಗಾಯತ ಸಮುದಾಯ ಬಿಜೆಪಿ ಜೊತೆಗೆ ಇದೆ ಎಂದು ಹೇಳಿದರು.
ಶೆಟ್ಟರ್ ಒಬ್ಬರಿಗೆ ಟಿಕೆಟ್ ತಪ್ಪಿಸಿಲ್ಲ. ಹಲವಾರು ಹಿರಿಯರಿಗೆ ಟಿಕೆಟ್ ಕೊಟ್ಟಿಲ್ಲ. ಕಾರಣವನ್ನು ಶೆಟ್ಟರ್ಗೆ ಹೇಳಿದ್ದೇವೆ. ನಾವು ಅದನ್ನು ಬಹಿರಂಗಪಡಿಸಲ್ಲ. ಮತದಾರರಿಗೆ ಯಾವ ರೀತಿ ಹೇಳಬೇಕೋ ಆ ರೀತಿ ಮುಟ್ಟಿಸುತ್ತೇವೆ. ಸವದಿ, ಶೆಟ್ಟರ್ಗೆ ಪಕ್ಷದಲ್ಲಿ ಎಲ್ಲಾ ಗೌರವ ಸ್ಥಾನಮಾನ ನೀಡಿದ್ದೆವು. ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ ಎಂದರು.