Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಿದ್ರಾಮಯ್ಯ ಟ್ರಾನ್ಸಫಾರ್ಮರ್ ಸುಟ್ಟಿದೆ: ಅಮಿತ್ ಷಾ ಆರೋಪ

ಸಿದ್ರಾಮಯ್ಯ ಟ್ರಾನ್ಸಫಾರ್ಮರ್ ಸುಟ್ಟಿದೆ: ಅಮಿತ್ ಷಾ ಆರೋಪ
ಶಿವಮೊಗ್ಗ , ಸೋಮವಾರ, 26 ಮಾರ್ಚ್ 2018 (18:49 IST)
ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ರಾನ್ಸ್ ಫಾರ್ಮರ್ ಸುಟ್ಟುಹೋಗಿದೆ. ಅದನ್ನು ಬದಲಿಸುವ ಬದಲು ಕಿತ್ತು ಬಿಸಾಕಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿಕೆ ನೀಡಿದ್ದಾರೆ.
ನಂ.1 ಎಂದು ಜಾಹೀರಾತು ಕೊಡುವ ಸರ್ಕಾರ ನಿರುದ್ಯೋಗದಲ್ಲಿ, ರೈತರ ಸಮಸ್ಯೆ ಹೆಚ್ಚಿಸುವುದರಲ್ಲಿ  ಹಾಗೂ ಭ್ರಷ್ಟಾಚಾರದಲ್ಲಿ ನಂ. 1 ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ. 
 
ಹೊಸ ಟ್ರಾನ್ಸ್ ಫಾರ್ಮರ್ ಯಡಿಯೂರಪ್ಪ ಅವರನ್ನು ಕರೆತನ್ನಿ ಎಂದು ಕಾರ್ಯಕರ್ತರಿಗೆ, ಮತದಾರರಿಗೆ ಕರೆ ನೀಡಿದರು. ಆಗ ಇಡೀ ರಾಜ್ಯಕ್ಕೆ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತದೆ. ಸಿದ್ದರಾಮಯ್ಯ ಅವರ ಸರ್ಕಾರ ಭ್ರಷ್ಟಾಚಾರ ಸರ್ಕಾರ ಎಂಬುದಕ್ಕೆ ಸಿದ್ಧರಾಮಯ್ಯ 40 ಲಕ್ಷದ ವಾಚ್ ಹಾಕಿರುವುದೇ ಸಾಕ್ಷಿ ಎಂದು ಅಮಿತ್ ಷಾ ದೂರಿದ್ದಾರೆ.
 
ಪಕೋಡ ಪ್ರೊಟೆಸ್ಟ್:  ಕಾಂಗ್ರೆಸ್ಸಿಗರ ಬಂಧನ
 
ಶಿವಮೊಗ್ಗ: ಶಿವಮೊಗ್ಗ ನಗರಕ್ಕೆ ಅಮಿತ್ ಷಾ ಭೇಟಿ ಹಿನ್ನೆಲೆ ಪಕೋಡ್ ಮಾಡಿ ಪ್ರತಿಭಟನೆ ಮಾಡಲು ಮುಂದಾಗಿದ್ದ ಯುವ ಕಾಂಗ್ರೆಸ್ ಮುಖಂಡರ ಮನೆಗಳಿಗೆ ತೆರಳಿ ಪೊಲೀಸರು ಬಂಧಿಸಿದ್ದಾರೆ. ಗಿರೀಶ್, ಕಿರಣ್, ರಂಗನಾಥ್ ಸೇರಿದಂತೆ ಇತರ ಕಾಂಗ್ರಸ್ ಯುವ ಘಟಕದ ಮುಖಂಡರನ್ನು ಪೊಲೀಸರು ಬಂಧನ ಮಾಡಿದ್ದಾರೆ.  ಅಮಿತ್ ಷಾ ರೋಡ್ ಷೋ ವೇಳೆ ಪ್ರತಿಭಟನೆ ನಡೆಸಲು ಮುಂದಾಗಿದ್ದ ಕಾಂಗ್ರೆಸ್ ಯುವ ಕಾರ್ಯಕರ್ತರು ಇವರಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾಂಗ್ರೆಸ್ಸಿಗರನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರದೀಪ್ ಶೆಟ್ಟರ್ ಮಾನಸಿಕ ಸ್ಥಿತಿ ಸರಿಯಿಲ್ಲ: ರಾಜಣ್ಣ ಕೊರವಿ ಆರೋಪ