Publish Date: Mon, 05 Feb 2018 (14:14 IST)
Updated Date: Mon, 05 Feb 2018 (14:17 IST)
ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ಅಂಬರೀಶ್ ಗರಂ ಆಗಿದ್ದಾರೆ.
ಅಂಬರೀಶ್ ಆರೋಗ್ಯ ಸರಿಯಿಲ್ಲ ಎಂದು ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಗೆ ತಿರುಗೇಟು ನೀಡಿರುವ ಅಂಬರೀಷ್ ನನಗೆ ಆರೋಗ್ಯ ಸರಿಯಿಲ್ಲವೆನ್ನುವುದು ರಾಜ್ಯಕ್ಕೆ ದೇಶಕ್ಕೆ ಗೊತ್ತಿದೆ. ಅದನ್ನು ಬೇರೆಯವರು ಹೇಳುವ ಅಗತ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ಆರೋಗ್ಯ ಸರಿಯಿಲ್ಲ ಎಂದು ಹೇಳಿದ್ದಾರೆ. ನನಗೆ ಒಂದು ರೋಗವಿದೆ. ಆದರೆ, ಅವರಿಗೆ ಹಲವಾರು ರೋಗಗಳಿವೆ ಎಂದು ಟಾಂಗ್ ನೀಡಿದ್ದಾರೆ.
ಸಚಿವ ಶಿವಕುಮಾರ್ ಇನ್ನೊಬ್ಬರ ಬಗ್ಗೆ ಹೇಳಿಕೆ ನೀಡುವುದು ಬಿಟ್ಟು ತಮ್ಮ ಜೀವನದತ್ತ ಗಮನಹರಿಸಿದರೆ ಸಾಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಅಂಬರೀಶ್ ಸಲಹೆ ನೀಡಿದ್ದಾರೆ.