ನವದೆಹಲಿ: ಟೀಂ ಇಂಡಿಯಾ ದ.ಆಫ್ರಿಕಾ ನಡುವಿನ ಏಕದಿನ ಪಂದ್ಯದಲ್ಲಿ ಅಂಪಾಯರ್ ಗಳು ಗೆಲುವಿಗೆ ಎರಡು ರನ್ ಬಾಕಿಯಿದ್ದಾಗ ಲಂಚ್ ಬ್ರೇಕ್ ನೀಡಿದ್ದನ್ನು ತಮಾಷೆ ಮಾಡುವ ಟ್ವೀಟ್ ಮಾಡುವಾಗ ಕ್ರಿಕೆಟಿಗ ಸೆಹ್ವಾಗ್ ಎಡವಟ್ಟು ಮಾಡಿಕೊಂಡಿದ್ದಾರೆ.
ಸೆಹ್ವಾಗ್ ಟ್ವೀಟ್ ನಲ್ಲಿ ಅಂಪಾಯರ್ ಗಳು ಬ್ಯಾಂಕ್ ನೌಕರರ ಹಾಗೆ ಬ್ಯಾಟ್ಸ್ ಮನ್ ಗಳಿಗೆ ಬಾಕಿ ರನ್ ಮಾಡಲು ಊಟದ ನಂತರ ಬನ್ನಿ ಎಂದು ಪೆವಿಲಿಯನ್ ಗೆ ಕಳುಹಿಸಿದರು ಎಂದು ತಮಾಷೆ ಮಾಡಿದ್ದರು.
ಈ ಟ್ವೀಟ್ ಗೆ ಕೆಲವು ಬ್ಯಾಂಕ್ ನೌಕರರು ಟ್ವಿಟರ್ ನಲ್ಲೇ ಸೆಹ್ವಾಗ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವೂ ಬ್ಯಾಂಕ್ ನೌಕರರೇ. ಆದರೆ ಗ್ರಾಹಕರಿಗೆ ಲಂಚ್ ಮುಗಿದ ಮೇಲೆ ಬನ್ನಿ ಎನ್ನಲ್ಲ ಎಂದಿದ್ದಾರೆ.
ಇದೀಗ ಈ ಪ್ರತಿಕ್ರಿಯೆಗಳಿಗೆ ಸಮಜಾಯಿಷಿ ನೀಡಿರುವ ವೀರೂ, ಬ್ಯಾಂಕ್ ಗಳ ಸಮಸ್ಯೆಯನ್ನು ತೆರೆದಿಟ್ಟಿದ್ದಾರೆ. ಬಹುಶಃ ನೀವು ಈ ರೀತಿ ಮಾಡುವವರಲ್ಲ. ಆದರೆ ಹೆಚ್ಚಿನ ಬ್ಯಾಂಕ್ ಗಳಲ್ಲಿ ಇದೇ ಸಮಸ್ಯೆ. ಕೆಲಸ ಮಾಡಲು ಹೋದರೆ ಸರ್ವರ್ ಡೌನ್, ಊಟದ ಸಮಯ, ಪ್ರಿಂಟರ್ ಸರಿ ಇಲ್ಲ ಎಂದೆಲ್ಲಾ ನೆಪ ಹೇಳಿ ಅಲೆದಾಡಿಸುತ್ತಾರೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ