Publish Date: Fri, 08 Oct 2021 (21:00 IST)
Updated Date: Fri, 08 Oct 2021 (21:05 IST)
ಸರ್ಕಾರದ ಅಧೀನದಲ್ಲಿರುವ ಏರ್ ಇಂಡಿಯಾ ಕಂಪನಿಯು ಕೊನೆಗೂ ಟಾಟಾ ಸನ್ಸ್ ಕಂಪನಿಯ ಪಾಲಾಗಿದೆ.
ಬಂಡವಾಳ ಹಿಂಪಡೆತ ಹಾಗೂ ನಾಗರಿಕ ವಿಮಾನಯಾನ ಇಲಾಖೆಯ ಕಾರ್ಯದರ್ಶಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಾಟಾ ಸನ್ಸ್ ಕಂಪನಿಯು ಏರ್ ಇಂಡಿಯಾ ಖರೀದಿಗೆ ಸಲ್ಲಿಸಿದ್ದ ಟೆಂಡರ್ ಒಪ್ಪಿಗೆಯಾಗಿರುವುದನ್ನು ಘೋಷಿಸಿದರು.ಬಂಡವಾಳ ಹಿಂಪಡೆತ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ (DIPAM) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಮತ್ತು ನಾಗರಿಕ ವಿಮಾನಯಾನ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ಕಂಪನಿಯೊಂದು ಏರ್ಇಂಡಿಯಾ ಖರೀದಿಗೆ ಟೆಂಡರ್ ಬಿಡ್ ಸಲ್ಲಿಸಿದ ನಂತರ, ಸರ್ಕಾರ ಅದನ್ನು ಒಪ್ಪಿಕೊಂಡ ನಂತರದಲ್ಲಿ ಯಾವುದೇ3 ಚರ್ಚೆಗೆ ಅವಕಾಶ ಇರುವುದಿಲ್ಲ. ಈ ಕುರಿತು ವಿವಿಧ ಇಲಾಖೆಗಳ ಸಚಿವರು ಮತ್ತು ಉನ್ನತ ಅಧಿಕಾರಿಗಳು ಒಂದು ನಿರ್ಣಯಕ್ಕೆ ಬಂದಿದ್ದಾರೆ.
ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ 18,718 ಕೋಟಿ ಮೊತ್ತಕ್ಕೆ ಬಿಡ್ ಪಡೆದು ಏರ್ ಇಂಡಿಯ ಸೇರಿದೆ.ಏರ್ ಇಂಡಿಯಾ ಕಂಪನಿಯ ಬಿಡಿಂಗ್ನಲ್ಲಿ ಟಾಟಾ ಸನ್ಸ್ ಗೆಲುವು ಸಾಧಿಸಿದೆ ಎಂದು ಅವರು ತಿಳಿಸಿದರು.ಸರ್ಕಾರ ಬಿಡ್ ಗೆ ಆಹ್ವಾನಿಸಿದಾಗ ಏಳು ಸಂಸ್ತೆಗಳು ಡಿಸೆಂಬರ್ 2020 ರೊಳಗೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಐವರು ಅರ್ಹತೆಯ ಅವಶ್ಯಕತೆಗಳನ್ನು ಪೂರೈಸದ ಕಾರಣ ಅನರ್ಹಗೊಂಡಿದ್ದಾರೆ.
ಎಂದು ಮಾಹಿತಿ ನೀಡಿದರು.
ಭಾರತ ಸರ್ಕಾರವು ತನ್ನ ಅಧೀನದಲ್ಲಿರುವ ಏರ್ ಇಂಡಿಯಾದ ಶೇ 100ರಷ್ಟು ಷೇರುಗಳನ್ನೂ ಮಾರಾಟ ಮಾಡಲು ಒಪ್ಪಿಕೊಂಡಿದೆ.