Webdunia - Bharat's app for daily news and videos

Install App

100 ಅಂಕ ವಿದ್ಯಾರ್ಥಿಗಳು ಪಡೆದಾರೆ ಮಾತ್ರ ಇಂಜಿನಿಯರಿಂಗ್ ಸೀಟ್ ಗೆ ಪ್ರವೇಶ

Webdunia
ಶನಿವಾರ, 2 ಅಕ್ಟೋಬರ್ 2021 (20:56 IST)
ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ(Second PUC) ವಿದ್ಯಾರ್ಥಿ ಶೇ.95ಕ್ಕಿಂತ ಅಧಿಕ ಅಂಕ ಗಳಿಸಿದರೆ ಆ ವಿದ್ಯಾರ್ಥಿ ಹಾಗೂ ಪೋಷಕರಿಗೆ ಅತೀವ ಮೆಚ್ಚುಗೆ ವ್ಯಕ್ತವಾಗುತ್ತದೆ. ಆದರೆ ದೆಹಲಿಯಲ್ಲಿ(Delhi) ಶೇ.95 ಅಂಕ ಗಳಿಸಿದವರಿಗೆ ಮೆಡಿಕಲ್‌,  ಎಂಜಿನಿಯರಿಂಗ್‌ ಬಿಡಿ, ಸಾಮಾನ್ಯ ಪದವಿ ಕೋರ್ಸಿಗೂ ಪ್ರವೇಶ ಸಿಗುತ್ತಿಲ್ಲ.
 
ಪ್ರತಿ ವರ್ಷ ದೆಹಲಿಯಲ್ಲಿ(Delhi) ಪದವಿ ಪ್ರವೇಶಕ್ಕೆ ಭಾರಿ ಪೈಪೋಟಿ ಇರುತ್ತದೆ. ಆದರೆ ಈ ವರ್ಷ ಸಿಬಿಎಸ್‌ಇ 12ನೇ ತರಗತಿಯಲ್ಲಿ 70 ಸಾವಿರ ವಿದ್ಯಾರ್ಥಿಗಳು ಶೇ.95ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ಹೀಗಾಗಿ ಪೈಪೋಟಿ ಇನ್ನೂ ಹೆಚ್ಚಿದೆ.
 
ದೆಹಲಿ ವಿಶ್ವವಿದ್ಯಾಲಯದ ಜೀಸಸ್‌ ಅಂಡ್‌ ಮೇರಿ ಕಾಲೇಜು ಶುಕ್ರವಾರ ಬಿಎ (ಆನ​ರ್‍ಸ್) ಮನಃಶಾಸ್ತ್ರ ಕೋರ್ಸ್‌ನ ಪ್ರವೇಶಕ್ಕೆ ಮೊದಲ ಕಟಾಫ್‌ ಅಂಕ ಬಿಡುಗಡೆ ಮಾಡಿದ್ದು, ಶೇ.100ರಷ್ಟುಅಂಕ ಗಳಿಸಿದವರಿಗೆ ಪ್ರವೇಶ ನೀಡುವುದಾಗಿ ತಿಳಿಸಿದೆ. ಹಂಸರಾಜ್‌ ಕಾಲೇಜಿನಲ್ಲೂ ಕಂಪ್ಯೂಟ​ರ್‍ಸ್ ಸೈನ್ಸ್‌ ಆನರ್ಸ್‌ ಕೋರ್ಸ್‌ ಪ್ರವೇಶಕ್ಕೆ ಶೇ.100 ಅಂಕ ನಿಗದಿಪಡಿಸಲಾಗಿದೆ. ಇನ್ನು ಶ್ರೀ ಗಂಗಾರಾಮ್‌ ಕಾಲೇಜಿನಲ್ಲಿ ಕಾಮರ್ಸ್‌ ಫಾರ್‌ ಎಕನಾಮಿಕ್ಸ್‌ ಆನ​ರ್‍ಸ್ ಮತ್ತ ಬಿಕಾಂ ಆನ​ರ್‍ಸ್ಗೆ ಶೇ.100ರಷ್ಟು, ಹಿಂದೂ ಕಾಲೇಜ್‌ ಮತ್ತು ರಾಮ್‌ಜಾಸ್‌ ಕಾಲೇಜಿನಲ್ಲಿ ಪೊಲಿಟಿಕಲ್‌ ಸೈನ್ಸ್‌ ಆನ​ರ್‍ಸ್ಗೆ, ಹಿಂದೂ ಕಾಲೇಜ್‌ ಮತ್ತು ಎಸ್‌ಜಿಟಿಬಿ ಖಾಲ್ಸಾ ಕಾಲೇಜಿನಲ್ಲಿ ಬಿಕಾಂಗೆ, ದೀನ್‌ ದಯಾಲ್‌ ಕಾಲೇಜಿನಲ್ಲಿ ಕಂಪ್ಯೂಟ​ರ್‍ಸ್ ಸೈನ್ಸ್‌ ವಿಷಯಕ್ಕೆ ಶೇ.100ರಷ್ಟುಕಟಾಫ್‌ ನಿಗದಿ ಮಾಡಲಾಗಿದೆ.
 
ಏಕೆ ಇಷ್ಟೊಂದು ಕಟಾಫ್‌?:
 
ಪ್ರವೇಶಾತಿ ಮಿತಿಗಿಂತ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದನ್ನು ತಪ್ಪಿಸಲು ಈ ರೀತಿ ಕಟಾಫ್‌ ಅಂಕ ಪ್ರಕಟಿಸಲಾಗುತ್ತದೆ. ಹೆಚ್ಚು ಅಂಕ ಗಳಿಸಿದವರಿಗೆ ಮೊದಲು ಪ್ರವೇಶ ನೀಡಿ, ಬಳಿಕ ಉಳಿಕೆ ಸೀಟುಗಳಿಗೆ ಮತ್ತೊಮ್ಮೆ ಕಟಾಫ್‌ ಅಂಕ ನಿಗದಿಪಡಿಸಲಾಗುತ್ತದೆ. ಈಗ ಬಿಡುಗಡೆಯಾಗಿರುವುದು ಮೊದಲ ಕಟಾಫ್‌ ಪಟ್ಟಿ. ಸೀಟುಗಳ ಮಿತಿಗೆ ಅನುಗುಣವಾಗಿ ಮತ್ತಷ್ಟುಕಟಾಫ್‌ ಪಟ್ಟಿಬಿಡುಗಡೆಯಾಗಲಿವೆ ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments