ಡಾ.ಶಿವರಾಮ ಕಾರಂತ ಬಡಾವಣೆ ಯೋಜನೆ ವಿರೋಧಿಸಿ, ಬೀದಿಗಿಳಿದಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಯಲಹಂಕ ತಾಲೂಕಿನ 17 ಹಳ್ಳಿಗಳ ವ್ಯಾಪ್ತಿಯ 3546 ಎಕರೆ ಪ್ರದೇಶದಲ್ಲಿ ಡಾ.ಶಿವರಾಮಕಾರಂತ ಬಡಾವಣೆ ನಿರ್ಮಾಣವಾಗ್ತಿದೆ. ಸೂಕ್ತ ಪರಿಹಾರ ಮತ್ತು ನ್ಯಾಯ ಸಮ್ಮತಿ ರೀತಿ ಬಡಾವಣೆ ನಿರ್ಮಾಣಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು ಕಾಲ್ನನಡಿಗೆ ಜಾಥಾ ನಡೆಸಲು ಮುಂದಾಗಿದ್ರು. ಮೊದಲು ಪ್ರತಿಭಟನೆಗಿಳಿದ ಹೋರಾಟಗಾರರನ್ನು ಯಲಹಂಕದ ರಾಮಗೊಂಡನಹಳ್ಳಿ ಬಳಿ ಹೆಚ್ಚು ಮಂದಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತದನಂತ್ರ ಯಲಹಂಕದ ಕೆಂಪೇಗೌಡ ಸರ್ಕಲ್‌ನಲ್ಲಿ ರಸ್ತೆಗಿಳಿದ 100 ಮಂದಿ ಹೋರಾಟಗಾರರನ್ನು ಯಲಹಂಕ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೋರಾಟಗಾರರನ್ನು ವಶಕ್ಕೆ ಪಡೆದು 2 ಬಸ್ ಗಳಲ್ಲಿ ತುಂಬಿ ಕರೆದೊಯ್ದಿದ್ದಾರೆ.