ಜಗತ್ತಿನಾದ್ಯಂತ ಇಂದು ಭಾರತದ ಕುರಿತು ಹೆಮ್ಮೆ ಮೂಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ತಮ್ಮ ಏಳು ವರ್ಷದ ಅವಧಿಯಲ್ಲಿ ಹಗಲಿರಳು ಶ್ರಮಿಸಿ, ದೇಶದ ಘನತೆಯನ್ನು ಹೆಚ್ಚಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ(Ashwathnarayan) ಹೇಳಿದ್ದಾರೆ.
ಬಿಜೆಪಿಯಿಂದ(BJP) ನಗರದ ತಾಲೂಕು ಕ್ರೀಡಾಂಗಣ ಹತ್ತಿರ ಶುಕ್ರವಾರ ಹಮ್ಮಿಕೊಂಡ ಪ್ರಧಾನಿ ನರೇಂದ್ರ ಮೋದಿಯವರ 7 ವರ್ಷದ ಸಾಧನೆಯ ಕುರಿತ ಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
2014ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಮೋದಿ ಅವರು, ಹಲವು ಜನಪರ ಯೋಜನೆಗಳ ಮೂಲಕ ದೇಶದ ಚಿತ್ರಣವನ್ನೇ ಬದಲಿಸಿದ್ದಾರೆ. ಬಳಿಕ ಎರಡನೇ ಅವಧಿಯಲ್ಲೂ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಿದ್ದಾರೆ. ಭಾರತದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮೋದಿ ಎಲ್ಲ ವರ್ಗಗಳ ಸಂಕಷ್ಟಕ್ಕೆ ಮಿಡಿದಿದ್ದು, ದೇಶದ ಹಿತಚಿಂತನೆಗೆ ಬದ್ಧರಾಗಿದ್ದಾರೆ. ಕಳೆದ ಏಳು ವರ್ಷದಲ್ಲಿ ದೇಶದಲ್ಲಿ ಕಂಡರಿಯದ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶವಲ್ಲದೇ ಇಡೀ ಜಗತ್ತೇ ಮೆಚ್ಚುವಂತ ಕೆಲಸ ಮಾಡಿದ್ದಾರೆ ಎಂದರು.
ಸಂಸದ ಸಂಗಣ್ಣ ಕರಡಿ(Sanganna Karadi) ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಆಡಳಿತಾವಧಿಯಲ್ಲಿ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಜನಮೆಚ್ಚುಗೆ ಪಡೆದಿದ್ದಾರೆ. ಅವರ ಜನ್ಮ ದಿನದ ನಿಮಿತ್ತ ಇಡೀ ದೇಶಾದ್ಯಂತ ಬಿಜೆಪಿ ಸೇವಾ ಸಮರ್ಪಣೆ ಕಾರ್ಯಕ್ರಮ ಆಯೋಜಿಸಿದೆ. ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿಸಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತೆ. ಅಲ್ಲದೇ ಮುಸ್ಲಿಂ ಸಮಾಜದ ಮಹಿಳೆಯರ ಹಿತಕ್ಕಾಗಿ ತ್ರಿವಳಿ ತಲಾಖ್ರದ್ದು, ಕೋಟ್ಯಂತರ ರಾಮ ಭಕ್ತರ ಬಹುದಿನದ ಕನಸಾದ ಶ್ರೀರಾಮ ಮಂದಿರ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದಾರೆ. ಎನ್‌ಇಪಿ ಜಾರಿಯಿಂದ ದೇಶದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು.
'ಪ್ರಧಾನಿ ಮೋದಿಯಿಂದ ದೇಶ ಉದ್ಧಾರವಾಗಲೂ ಸಾಧ್ಯವಿಲ್ಲ'
ಈ ವೇಳೆ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ್, ಬಳ್ಳಾರಿ ವಿಭಾಗ ಪ್ರಭಾರಿ ಸಿದ್ದೇಶ್ಯಾದವ್, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪೂಜಪ್ಪ, ಸಹ ವಿಭಾಗ ಪ್ರಭಾರಿ ಚಂದ್ರಶೇಖರ್ಗೌಡ ಪಾಟೀಲ್ ಹೂಲಗೇರಿ, ಅಮರೇಶ ಕರಡಿ, ರಾಜ್ಯ ಕಾರ್ಯದರ್ಶಿ ಹೇಮಲತಾ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ ಗುಳಗಣ್ಣನವರ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವಾಣಿಶ್ರೀ ಮಠದ, ಪ್ರಧಾನ ಕಾರ್ಯದರ್ಶಿ ರಮೇಶ ಕವಲೂರು, ಅಮರೇಶ ಮುರಲಿ, ಗ್ರಾಮೀಣ ಪ್ರಧಾನ ಕಾರ್ಯದರ್ಶಿಗಳಾದ ಪಂಪಯ್ಯ ಹಿರೇಮಠ, ಜಿಲ್ಲಾ ಯುವ ಮೋರ್ಚಾದ ರವಿಚಂದ್ರ ಮಾಲಿಪಾಟೀಲ್, ಪುಟ್ಟರಾಜ ಚಕ್ಕಿ, ಶೋಭಾ ನಗರಿ, ನಾಗರತ್ನ ಪಾಟೀಲ್, ಮಹಾಲಕ್ಷ್ಮಿ ಕಂದಾರಿ, ಕೀರ್ತಿ ಪಾಟೀಲ್, ಜಯಶ್ರೀ ಗೊಂಡಬಾಳ, ಗೀತಾ ಮುತ್ತಾಳ, ಮಹೇಶ ಅಂಗಡಿ, ಡಿ. ಮಲ್ಲಣ್ಣ, ಸೋಮಣ್ಣ ಹಳ್ಳಿ, ನಾಸೀರ್ಹುಸೇನ್ಸೇರಿದಂತೆ ಮತ್ತಿತರರಿದ್ದರು.
ತಡವಾಗಿ ಬಂದ ಸಂಸದರು
ಕಾರ್ಯಕ್ರಮ ಬೆಳಗ್ಗೆ 9.30ಕ್ಕೆ ನಿಗದಿಯಾಗಿತ್ತು. ಆದರೆ, ಸುಮಾರು 1 ಗಂಟೆ ವಿಳಂಬವಾಗಿ ಆರಂಭವಾಗಿದ್ದು ಮಾತ್ರ ನಾನಾ ಚರ್ಚೆಗೆ ಕಾರಣವಾಯಿತು. ಅದರಲ್ಲೂ ಬಿಜೆಪಿ ರಾಜ್ಯ ಪ್ರಧಾನಕಾದರ್ಶಿ ಅಶ್ವತ್ಥನಾರಾಯಣ ಆಗಮಿಸಿದರೂ ಸಂಸದ ಸಂಗಣ್ಣ ಕರಡಿ ಬರಲೇ ಇಲ್ಲ. ಅವರಿಗಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ಅಶ್ವತ್ಥ ಕಾಯಬೇಕಾಗಿದ್ದು, ಬಿಜೆಪಿ ಪಾಳೆಯದಲ್ಲಿ ಗುಸು ಗುಸು ಚರ್ಚೆಗೆ ಕಾರಣವಾಯಿತು. ನಿಗದಿತ ಸಮಯಕ್ಕೆ ಆಗಮಿಸಬೇಕಾಗಿದ್ದ ಸಂಸದ ಸಂಗಣ್ಣ ಕರಡಿ ಅವರು ಬಿಜೆಪಿ ಕಾರ್ಯಕರ್ತನೋರ್ವನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತೆರಳಿದ್ದರಿಂದ ವಿಳಂಬವಾಗಿದೆ ಎಂದು ಹೇಳಲಾಯಿತು.