ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಿಂಧು ಲೋಕನಾಥ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾವು ಪ್ರೀತಿಸುತ್ತಿದ್ದ ಗೆಳೆಯ ಶ್ರೇಯಸ್ ಜೊತೆ ಸಿಂಧು ಸಪ್ತಪದಿ ತುಳಿದಿದ್ದಾರೆ.
ಆಗಸ್ಟ್ 27ರಂದು ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ನಡೆದ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ಶ್ರೇಯಸ್ ಕೊಡಿಯಾಲ್ ಮಂಗಳೂರು ಮೂಲದವರಾಗಿದ್ದು, ಪೂಮಾ ಕಂಪನಿಯಲ್ಲಿ ಹೆಚ್.ಆರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡ್ರಾಮಾ, ಲೈಫು ಇಷ್ಟೇನೆ, ಯಾರೇ ಕೂಗಾಡಲಿಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸಿಂಧು ಲೋಕನಾಥ್, 2 ವರ್ಷದಿಂದ ಶ್ರೇಯಸ್ ರನ್ನ ಲವ್ ಮಾಡುತ್ತಿದ್ದರು. ಲವ್ ಮಾಡುತ್ತಿರುವ ಬಗ್ಗೆ ಅವರೇ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಒಪ್ಪಿಕೊಂಡಿದ್ದರು.