ಮೈಸೂರಿನ ಹೋಟೆಲ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಬೆಸ್ಟ್ ಫ್ರೆಂಡ್ಸ್ ನರೇಶ್ ಮತ್ತು ಪವಿತ್ರಾ ಲೋಕೇಶ್ ಬೆಂಗಳೂರು ರೀಚ್ ಆಗಿದ್ದು, ಇಲ್ಲಿನ 5 ಸ್ಟಾರ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಮೈಸೂರಿನ ಖಾಸಗಿ ಹೋಟೆಲ್ ನ ಒಂದೇ ರೂಂ ನಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಉಳಿದುಕೊಂಡಿದ್ದರು. ಈ ಮಾಹಿತಿ ಪಡೆದು ಹೋಟೆಲ್ ಗೆ ತಲುಪಿದ ರಮ್ಯಾ ರಘುಪತಿ ರೂಂ ಬಾಗಿಲು ಬಡಿದು ಅವರಿಗೆ ಹೊರಬರುವಂತೆ ತಿಳಿಸಿದ್ದರು. ಆದರೆ ರಮ್ಯಾ ರಘುಪತಿ ಬಾಗಿಲು ಬಡಿದ್ರೂ ಪವಿತ್ರಾ ಮತ್ತು ನರೇಶ್ ರೂಂ ನಿಂದ ಹೊರಬಂದಿರಲಿಲ್ಲ.
ಬಳಿಕ ಪೊಲೀಸರು ಹೋಟೆಲ್ ಗೆ ಆಗಮಿಸಿದ ಬಳಿಕ ಅವರು ರೂಂ ನಿಂದ ಹೊರಬಂದಿದ್ದರು. ತಾವು ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಳ್ಳುತ್ತಿದ್ದ ನರೇಶ್ ಮತ್ತು ಪವಿತ್ರಾ ಈಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಈಗ ತಮ್ಮ ರಿಲೇಷನ್ ಶಿಪ್ ಬಗ್ಗೆ ಏನು ಹೇಳುತ್ತಾರೆ ಕಾದುನೋಡಬೇಕಿದೆ.