Publish Date: Thu, 22 Nov 2018 (18:39 IST)
Updated Date: Thu, 22 Nov 2018 (18:41 IST)
ಸಾಮಾಜಿಕ ಜಾಲತಾಣದಲ್ಲಿ ರಂಭಾಪುರಿ ಶ್ರೀಗಳ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಕ್ತರು ಒತ್ತಾಯಿಸಿದ್ದಾರೆ.
ರಂಭಾಪುರಿ ಶ್ರೀಗಳ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಂಭಾಪುರಿ ಶ್ರೀಗಳ ಅನುಯಾಯಿಗಳು ಕಲಬುರ್ಗಿಯ ಎಸ್.ಪಿ.ಗೆ ಮನವಿ ಸಲ್ಲಿಸಿದ್ದಾರೆ. ಜೇವರ್ಗಿ ತಾಲೂಕಿನ ಬಿಳವಾರ ಗ್ರಾಮದ ಅಯ್ಯನಗೌಡ ಪಾಟೀಲ ಎಂಬಾತ ಫೇಸ್ ಬುಕ್ ನಲ್ಲಿ ರಂಭಾಪುರಿ ಶ್ರೀಗಳ ಕುರಿತು ಅವಹೇಳನಕಾರಿ ಸ್ಟೇಟಸ್ ಹಾಕಿದ್ದರು. ರಂಭಾಪುರಿ ಶ್ರೀಗಳನ್ನು ವೇಶ್ಯೆಗೆ ಹೋಲಿಸಿದ್ದ ಅಯ್ಯನಗೌಡ ಪಾಟೀಲ, ಗಯ್ಯಾಳಿ ಇತ್ಯಾದಿಯಾಗಿ ಅವಹೇಳನ ಮಾಡಿದ್ದರು.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಂಭಾಪುರಿ ಶ್ರೀಗಳ ಬೆಂಬಲಿಗರು, ಎಸ್.ಪಿ. ಗೆ ಮನವಿ ಸಲ್ಲಿಸುವ ಮೂಲಕ ಅವಹೇಳನಕಾರಿ ಸ್ಟೇಟರ್ ಹಾಕಿದ ವ್ಯಕ್ತಿಯ ಬಂಧನಕ್ಕೆ ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲ ತಾಣಗಳ ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.