Publish Date: Sat, 11 Mar 2023 (18:38 IST)
Updated Date: Sat, 11 Mar 2023 (18:40 IST)
ಲಿವಿಂಗ್ ಟು ಗೆದರ್ ನಲ್ಲಿದ್ದ ಯುವಕ ಯುವತಿ ನಡಿವೆ ಮನಸ್ತಾಪ ಉಂಟಾಗಿ ಯುವತಿ ನಡುರಾತ್ರಿ ಅಪಾರ್ಟ್ಮೆಂಟ್ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾಳೆ.ಕೋರಮಂಗಲ 8th ಬ್ಲಾಕ್ ನ ರೇಣುಕಾ ರೆಸಿಡೆನ್ಸಿಯಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ 28ವರ್ಷದ ಅರ್ಚನ ಸಾವನ್ನಪ್ಪಿದ್ದಾಳೆ.ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಅರ್ಚನಾ ಹಾಗೂ ಆದೀಶ್ ಲಿವಿಂಗ್ ಟುಗೆದರದ ನಲ್ಲಿದ್ರು. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಅರ್ಚನ ಅಪಾರ್ಟ್ಮೆಂಟ್ ಮೇಲಿಂದ ಬಿದ್ದಿದ್ದಾಳೆ.ತಕ್ಷಣ ಪ್ರಿಯಕರ ಆದೀಶ್ ಆಸ್ಪತ್ರೆಗೆ ಸೇರಿಸಿದ್ರು ಚಿಕಿತ್ಸೆ ಫಲಕಾರಿಯಾಗದೆ ಅರ್ಚನ ಸಾವನ್ನಪ್ಪಿದ್ದಾಳೆ.ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು, ಪ್ರಿಯಕರ ಆದೀಶ್ ಮೇಲೆ ಅನುಮಾನ ವ್ಯಕ್ತವಾಗಿದ್ದು ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.