Publish Date: Sat, 02 Mar 2019 (20:01 IST)
Updated Date: Sat, 02 Mar 2019 (20:02 IST)
ಹುಡುಗಿಯೊಬ್ಬಳ ಪ್ರೀತಿಯ ವಿಷಯ ವಿದ್ಯಾರ್ಥಿಯೊಬ್ಬನ ಜೀವಕ್ಕೆ ಕುತ್ತು ತಂದಿದೆ.
ವಿದ್ಯಾರ್ಥಿನಿಯೊಬ್ಬಳ ಪ್ರೀತಿಯ ವಿಷಯಕ್ಕೆ ವಿದ್ಯಾರ್ಥಿಗಳಿಬ್ಬರು ಬಡಿದಾಡಿಕೊಂಡ ಘಟನೆ ನಡೆದಿದ್ದು, ಘಟನೆಯಲ್ಲಿ ಓರ್ವ ವಿದ್ಯಾರ್ಥಿಗೆ ಚಾಕು ಇರಿಯಲಾಗಿದೆ.
ಕಾಲೇಜು ವಿದ್ಯಾರ್ಥಿಗಳಿಬ್ಬರ ಮಧ್ಯೆ ಜಗಳ ನಡೆದು ವಿದ್ಯಾರ್ಥಿಯೊಬ್ಬನಿಗೆ ಚಾಕುವಿನಿಂದ ಇರಿದಿರುವ ಘಟನೆ ಮಧುಗಿರಿ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಉಮೇಶ್ (20) ಎಂಬಾತನೇ ಚಾಕು ಇರಿತಕ್ಕೊಳಗಾದ ವಿದ್ಯಾರ್ಥಿ. ಸಂಜೆ 4 ಗಂಟೆ ಸಮಯದಲ್ಲಿ ಕಾಲೇಜು ಬಿಟ್ಟ ನಂತರ ವಿದ್ಯಾರ್ಥಿಗಳಾದ ಆಕಾಶ್ ಮತ್ತು ಉಮೇಶ್ ನಡುವೆ ಗಲಾಟೆ ನಡೆದಿದೆ.
ಈ ಸಂದರ್ಭದಲ್ಲಿ ಆಕಾಶ್ ತನ್ನ ಸಹಪಾಠಿ ಉಮೇಶ್ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಮಧುಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.