Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಕ್ರಮ ಸಂಬಂಧ ಗೊತ್ತಾಗಿದ್ದಕ್ಕೆ ಮಗಳನ್ನೇ ಕೊಂದ ಪಾಪಿ ತಾಯಿ

ಅಕ್ರಮ ಸಂಬಂಧ ಗೊತ್ತಾಗಿದ್ದಕ್ಕೆ ಮಗಳನ್ನೇ ಕೊಂದ ಪಾಪಿ ತಾಯಿ
ಶಿವಮೊಗ್ಗ , ಗುರುವಾರ, 12 ಮಾರ್ಚ್ 2020 (12:12 IST)

ಯುವಕನೊಬ್ಬನೊಂದಿಗೆ ತಾನು ಹೊಂದಿರುವ ಅಕ್ರಮ ಸಂಬಂಧದ ಬಗ್ಗೆ ಮಗಳಿಗೆ ಗೊತ್ತಾದ ಕಾರಣಕ್ಕಾಗಿ ಮಗಳನ್ನೇ ತಾಯಿಯೊಬ್ಬಳು ಕೊಲೆ ಮಾಡಿದ್ದಾಳೆ.


ಹದಿನೆಂಟು ವರ್ಷದ ಅಮೃತಾಳನ್ನು ಆಕೆಯ ತಾಯಿ ಲತಾ ಕೊಲೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ತನ್ನ ಅಕ್ರಮ ಸಂಬಂಧವನ್ನು ಮುಚ್ಚಿಡಲು ಅಮೃತಾಳನ್ನು ಅಜ್ಜಿಯ ಮನೆಯಲ್ಲಿ ಬಿಟ್ಟಿದ್ದಳು. ಆದರೆ ಕಾಲೇಜ್ ರಜೆ ಇದ್ದ ಕಾರಣ ತಾಯಿ ಲತಾ ಬಳಿ ಮಗಳು ಅಮೃತಾ ಬಂದಿದ್ದಾಳೆ. ಈ ವೇಳೆ ತಾಯಿಯ ಅನೈತಿಕ ಸಂಬಂಧದ ಬಗ್ಗೆ ಗೊತ್ತಾಗಿದೆ.

ಅಲ್ಲದೇ ಲತಾ ಅಕ್ರಮ ಸಂಬಂಧ ಹೊಂದಿದ್ದ ಯುವಕನು ಅಮೃತಾಳ ಜೊತೆಗೂ ಹೆಚ್ಚು ಕ್ಲೋಸ್ ಆಗುತ್ತಿದ್ದ ಎನ್ನಲಾಗಿದೆ. ಹೀಗಾಗಿ ತಾಯಿಯೇ ಮಗಳನ್ನು ಕೊಲೆ ಮಾಡಿದ್ದಾಳೆ ಎನ್ನಲಾಗ್ತಿದೆ. ಶಿವಮೊಗ್ಗದ ರತ್ನಾಕರ ನಗರದಲ್ಲಿ ಘಟನೆ ನಡೆದಿದ್ದು, ಲತಾಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

10ನೇ ತರಗತಿಯ ವಿದ್ಯಾರ್ಥಿ ಮಾಡಿದ್ದಾನೆ ಇಂತಹ ನೀಚ ಕೆಲಸ