Publish Date: Sun, 01 Mar 2020 (21:46 IST)
Updated Date: Sun, 01 Mar 2020 (21:47 IST)
ಮೊದಲ ಪತ್ನಿಯ ಮಗನು ತನ್ನ ಅಪ್ಪನ ಎರಡನೇ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಲ್ಲದೇ ಆಸ್ತಿಗಾಗಿ ಅಪ್ಪನನ್ನೇ ಕೊಲೆ ಮಾಡಿದ್ದಾನೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ನಗರದಲ್ಲಿ ಘಟನೆ ನಡೆದಿದ್ದು, ಮಡಿವಾಳೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಾಮು ನಾಯಕ ಕೊಲೆಯಾದವನು.
ದಾಮು ನಾಯಕನ 2ನೇ ಪತ್ನಿ ಪ್ರೇಮಾ ನಾಯಕ ಜೊತೆಗೆ ದಾಮುವಿನ ಮೊದಲ ಪತ್ನಿ ಮಗನಾದ ಸುಭಾಸ್ ದಾಮು ನಾಯಕ್ ಅಕ್ರಮ ಸಂಬಂಧ ಹೊಂದಿದ್ದನು.
ಆಸ್ತಿಗಾಗಿ ಸುಪಾರಿ ಕೊಟ್ಟು ತಂದೆಯನ್ನೇ ಕೊಲೆ ಮಾಡಿಸಿದ್ದಾನೆ ಮಗರಾಯ. ಇದೀಗ ಅಕ್ರಮ ಸಂಬಂಧ ಹೊಂದಿದ್ದ ತಾಯಿ, ಮಗ, ಇಬ್ಬರು ಶಿಕ್ಷಕರು ಹಾಗೂ ಓರ್ವ ಸುಪಾರಿ ಕಿಲ್ಲರ್ ನನ್ನು ಪೋಲಿಸರು ಬಂಧನ ಮಾಡಿದ್ದಾರೆ.