Daily Horoscope

Select Your Language

Notifications

webdunia
webdunia
webdunia
webdunia

ಮುದ್ದು ಪುಟಾಣಿ ತೂಕಡಿಸುವ ವಿಡಿಯೊ ವೈರಲ್‌

ಮುದ್ದು ಪುಟಾಣಿ
ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ದೃಶ್ಯ ಎಲ್ಲರಲ್ಲೂ ಮಂದಹಾಸ ಮೂಡಿಸಿದೆ. 53 ಸೆಕೆಂಡುಗಳ ಈ ದೃಶ್ಯ ಮುದ್ದು ಮಕ್ಕಳು ಅಂಗನವಾಡಿಯಲ್ಲಿ ಕುಳಿತಿರುವ ದೃಶ್ಯದ ಮೂಲಕ ಶುರುವಾಗುತ್ತದೆ. ಈ ಮುದ್ದು ಮಕ್ಕಳ ನಡುವೆ ಕುಳಿತ ಪುಟಾಣಿಗೆ ನಿದ್ದೆ ಆವರಿಸಿತ್ತು. ಹೀಗಾಗಿ, ಈ ಕಂದ ಕುಳಿತಲ್ಲೇ ತೂಕಡಿಸುವುದಕ್ಕೆ ಆರಂಭಿಸಿದ್ದಳು. ಇದನ್ನು ಇತರ ಸಹಪಾಠಿಗಳೂ ನೋಡುತ್ತಿದ್ದರು. ಹೀಗೆ ಒಂದಷ್ಟು ಹೊತ್ತು ತೂಕಡಿಸಿದ್ದ ಈ ಮುಗ್ಧ ಬಾಲಕಿ ಕೊನೆಗೆ ಬಿದ್ದೇ ಬಿಟ್ಟಳು. ಹೀಗೆ ಕುಳಿತಲ್ಲೇ ಬಿದ್ದಾಗ ನಿದ್ದೆಯಿಂದ ಎಚ್ಚರಗೊಂಡ ಬಾಲಕಿ ನಗುವ ದೃಶ್ಯವಂತೂ ಅದ್ಭುತವಾಗಿದ್ದು. ಈ ಮುದ್ದಾದ ಪ್ರತಿಕ್ರಿಯೆಗೆ ಮನಸೋತು ಬಹುತೇಕರು ಈ ದೃಶ್ಯವನ್ನು ಶೇರ್​ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

360 ಡಿಗ್ರಿ ನೋಟದ ವಿಡಿಯೊ ಪೋಸ್ಟ್