Publish Date: Fri, 08 Apr 2022 (13:38 IST)
Updated Date: Fri, 08 Apr 2022 (13:42 IST)
ಇತ್ತೀಚೆಗೆ ಆನಂದ್ ಮಹೀಂದ್ರಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಅದು ವೈರಲ್ ಆಗಿದೆ. ವಿಡಿಯೋದಲ್ಲಿ ಮೌಂಟ್ ಎವರೆಸ್ಟ್ನ ಶಿಖರದಿಂದ 360 ಡಿಗ್ರಿ ನೋಟ ಹೇಗಿದೆ ಎನ್ನುವುದನ್ನು ತೋರಿಸಲಾಗಿದೆ. ಇದಕ್ಕೆ ಕ್ಯಾಪ್ಶನ್ ನೀಡಿರುವ ಆನಂದ್ ಮಹೀಂದ್ರಾ ಬದುಕಿನ ಪಾಠ ಹೇಳಿದ್ದಾರೆ. ಯಾವುದಾದರೂ ಕಠಿಣ ನಿರ್ಧಾರವನ್ನು ನೀವು ತೆಗೆದುಕೊಳ್ಳಬೇಕಾದರೆ ನೀವು ಎವರೆಸ್ಟ್ನ ಮೇಲಿದ್ದೀರಿ ಎಂದು ಭಾವಿಸಲು ಇದು ಸಹಾಯ ಮಾಡುತ್ತದೆ. ಯಾವುದೇ ಅಡೆತಡೆಯಿಲ್ಲದೆ ಜಗತ್ತಿನ ಕುರಿತು ನಿಮಗೆ ನೋಟ ಸಿಗುತ್ತದೆ. ಕಾರಣ, ನೀವು ಎಲ್ಲವುಗಳಿಗಿಂತ ಎತ್ತರದಲ್ಲಿರುತ್ತೀರಿ. ಇದರಿಂದ ದೊಡ್ಡದಾದ, ದೂರದೃಷ್ಟಿಯ ನೋಟ ನಿಮಗೆ ಸಿಗುತ್ತದೆ ಎಂದು ಬರೆದುಕೊಂಡಿದ್ದಾರೆ.