ಐಟಿ ದಾಳಿ ಪ್ರಕರಣ ಹಿನ್ನೆಲೆ ನಾಳೆ ಬಿಜೆಪಿ ಪ್ರತಿಭಟನೆ ನಿರ್ಧಾರ ವಿಚಾರವಾಗಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
ಸಭೆಯಲ್ಲಿ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಛಲವಾದಿ ನಾರಾಯಣ ಸ್ವಾಮಿ ಮತ್ತಿತರರು ಭಾಗಿಯಾಗಿದ್ದಾರೆ.ನಾಳೆ ರಾಜ್ಯಾದ್ಯಂತ ಪ್ರತಿಭಟನೆಯ ರೂಪರೇಷೆಯ ಬಗ್ಗೆ ಚರ್ಚೆ ನಡೆಸಲಾಗಿದೆ.ಬೆಂಗಳೂರಿನಲ್ಲೂ ಕೂಡ ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿದೆ.ಪ್ರತಿಭಟನೆಯ ಪೂರ್ವ ಸಿದ್ಧತೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ಇನ್ನೂ ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರ್ನಾಟಕದಲ್ಲಿ ಲೂಟಿ ಸರ್ಕಾರ ಜಾರಿಯಲ್ಲಿ ಇದೆ.ಅಧಿಕಾರ ಬಂದ ನಂತರ ಅಧಿಕಾರಿಗಳಿಗೆ ರೇಟ್ ಫಿಕ್ಸ್ ಸರ್ಕಾರ ಮಾಡಿದೆ.ಕಲಾವಿದರಿಗೂ ಕಮೀಷನ್ ಕಂಟಕ ಇದೆ.ಕಲಾವಿದರಿಂದಲೂ ಕಮೀಷನ್ ಕೇಳ್ತಿದ್ದಾರೆ.ಇದು ಎಟಿಎಂ ಸರ್ಕಾರ.ಗುತ್ತಿಗೆದಾರರಿಗೆ 650 ಕೋಟಿ ಬಿಡುಗಡೆ ಮಾಡ್ತಾರೆ.ಅದಾದ ಸ್ವಲ್ಪ ದಿನಕ್ಕೆ ಐಟಿ ದಾಳಿಯಲ್ಲಿ ಕೋಟಿ ಕೋಟಿ ಸಿಗುತ್ತೆ.ಐಟಿ ದಾಳಿಯಲ್ಲಿ ಸಿಕ್ಕ ಹಣಕ್ಕೂ ಕಾಂಗ್ರೆಸ್ ಗೂ ಸಂಬಂಧ ಇದೆ.ಈ ಹಣ ಕಾಂಗ್ರೆಸ್ ಲೂಟಿ ಸರ್ಕಾರ ಹೊಡೆದಿದೆ.ಈ ಲೂಟಿ ಸರ್ಕಾರದ ವಿರುದ್ಧ ನಾಳೆ ಮತ್ತು ನಾಡಿದ್ದು ಬೃಹತ್ ಹೋರಾಟ ನಡೆಸ್ತೇವೆ.ನಾಳೆ ಜಿಲ್ಲೆಗಳಲ್ಲಿ ನಾಡಿದ್ದು ಮಂಡಲಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡ್ತೇವೆ.ಐಟಿ ದಾಳಿಯಲ್ಲಿ ಕೋಟಿ ಕೋಟಿ ಪತ್ತೆ ಹಿನ್ನೆಲೆ ನೈತಿಕ ಹೊಣೆ ಸಿಎಂ, ಡಿಸಿಎಂ ರಾಜೀನಾಮೆ ಕೊಡಬೇಕು ಎಂದು ನಳಿನ್ ಕುಮಾರ್ ಕಟೀಲ್ ಅಗ್ರಹಿಸಿದ್ದಾರೆ.