ಸಸ್ಯರಾಶಿ ಉಳಿಸುವ ವಿಶೇಷ ಪ್ರಯತ್ನವನ್ನ ಲಾಲ್ ಬಾಗ್ ಮಾಡಿದೆ.ಮರದ ಪ್ರೇಮ್ ಗಳಿಂದ ಸಣ್ಣ ಮನೆಯಾಕಾರದಲ್ಲಿ ವಿನ್ಯಾಸಗೊಳಿಸಿ ಕೀಟಗಳಿಗಾಗಿ ಮನೆ ತಯಾರಿ ಮಾಡಿದೆ.ವಿಭಾಗದಲ್ಲಿ ಸಣ್ಣ, ಮಧ್ಯಮ ಮರದ ತುಂಡುಗಳು, ಒಣ ಹುಲ್ಲು, ವಿವಿಧ ರೀತಿಯ ಸಸ್ಯಗಳ ಕಟ್ಟಿಗೆ ಇತ್ಯಾದಿಗಳನ್ನು ಒಂದಕ್ಕೊಂದು ಅಂಟಿಕೊಂಡಿರುವಂತೆ ಜೋಡಿಸಿ ಭದ್ರಪಡಿಸಿ, ವೇದಿಕೆ ಸಿದ್ಧ ಮಾಡಿದೆ.ಈ ರಚನೆ ಎಲ್ಲಾ ಬಗೆ ಕೀಟ, ದುಂಬಿಗಳು ನೆಲೆಸಲು ಮೂಲನೆಲೆ ಕಲ್ಪಿಸಿ, ಸಂತಾನೋತ್ಪತ್ತಿ ಹೊಂದಿ ಅವುಗಳ ವೃದ್ಧಿ ಮತ್ತು ಬೆಳವಣಿಗೆಗೆ ಕಾರಣವಾಗಲಿದೆ.ಲಾಲ್ ಬಾಗ್ ಈ ಪ್ರಯತ್ನಕ್ಕೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.