Publish Date: Fri, 26 Oct 2018 (16:50 IST)
Updated Date: Fri, 26 Oct 2018 (16:54 IST)
ಬೆಳಗಾವಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕಿತ್ತೂರಿನಲ್ಲಿ ಜಿಲ್ಲಾಡಳಿತ ಬೆಳಗಾವಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ ರಾಣಿ ಚೆನ್ನಮ್ಮನ ಕಿತ್ತೂರು ಉತ್ಸವ-2018ರ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಗುರುವಾರ ಕಲಬುರಗಿಯ ಜಿ.ಚಂದ್ರಕಾಂತ ಅವರ ತ್ರಿಭಾಷಾ ವಚನ ಗಾಯನ ಸಭಿಕರೆಲ್ಲರ ಹೃನ್ಮನ ಗೆದ್ದಿತು.
ಮಧುವಂತಿ ರಾಗದಲ್ಲಿ ಬಸವಣ್ಣನವರ “ಉಳ್ಳವರು ಶಿವಾಲಯ ಮಾಡುವರು.........” ವಚನವನ್ನು ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸುಮಧುರವಾಗಿ ಪ್ರಸ್ತುತ ಪಡಿಸಿ ಎಲ್ಲರ ಗಮನ ಸೆಳೆದರು. ತ್ರಿಭಾಷಾ ವಚನ ಗಾಯನ ಕಾರ್ಯಕ್ರಮಕ್ಕೆ ಕಲಬುರಗಿಯ ಗುರುಶಾಂತಯ್ಯ ಸ್ಥಾವರಮಠ ಹಾರ್ಮೋನಿಯಂ ಸಾಥ್ ಹಾಗೂ ವೀರಭದ್ರಯ್ಯ ಸ್ಥಾವರಮಠ ತಬಲಾ ಸಾಥ್ ನೀಡಿದರು.