ರೈಸ್ ಪುಲ್ಲಿಂಗ್ ವಸ್ತುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಪಾಲು ನೀಡುವುದಾಗಿ ಹೇಳಿ ಸಾರ್ವಜನಿಕರನ್ನು ನಂಬಿಸಿ ಹಣ ವಸೂಲಿ ಮಾಡುತ್ತಿದ್ದ ದಂಪತಿ ಸೇರಿ ಆರು ಮಂದಿಯನ್ನು ವೈಯಾಲಿಕಾವಲ್ ಠಾಣೆ ವ್ಯಾಪ್ತಿಯಲ್ಲಿ ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ.
ಆಂಧ್ರ ಮೂಲದ ದಂಪತಿ ಶೇಖ್ ಅಹ್ಮದ್, ಆತನ ಪತ್ನಿ ಜರೀನಾ ಅಹ್ಮದ್, ನಗರದ ರಾಘವೇಂದ್ರ ಪ್ರಸಾದ್, ನಯೀಮುಲ್ಲಾ, ಮುದಾಸೀರ್ ಅಹ್ಮದ್ ಮತ್ತು ಫರೀದಾ ಬಂಧಿತ ಆರೋಪಿಗಳು ಎಂದು ಪೆÇಲೀಸರು ತಿಳಿಸಿದರು.
ದಂಪತಿ ಶೇಖ್ ಹಾಗೂ ಜರೀನಾ ಸೇರಿದಂತೆ ಆರು ಮಂದಿ ಆರೋಪಿಗಳು ವೈಯಾಲಿಕಾವಲ್ ಪ್ರದೇಶದ ಹೋಟೆಲ್‍ವೊಂದರಲ್ಲಿ ಎರಡು ತಿಂಗಳಿನಿಂದ ವಾಸವಾಗಿದ್ದರು. ಹೊಟೇಲ್‍ನಲ್ಲಿದ್ದುಕೊಂಡೇ ಸಭೆ-ಸಮಾರಂಭ ನಡೆಸುತ್ತಿದ್ದ ಇವರಿಗೆ ಉಳಿದ ನಾಲ್ವರು ಜತೆಯಾಗಿದ್ದರು. ಸಭೆ ಸಮಾರಂಭಗಳಲ್ಲಿ ಅಮಾಯಕರನ್ನೇ ಗುರಿಯಾಗಿಸಿ ತಮ್ಮ ವಂಚನೆಯ ಬಲೆ ಬೀಸುತ್ತಿದ್ದ ಆರೋಪಿಗಳು ಬಳಿಕ ಅವರಿಂದ ಲಕ್ಷ ಲಕ್ಷ ರೂಪಾಯಿ ವಸೂಲಿ ಮಾಡಿ ಮೋಸ ಮಾಡುತ್ತಿದ್ದರು.
ಆರೋಪಿಗಳು ತಮ್ಮ ಬಳಿ ರೈಸ್ ಪುಲ್ಲಿಂಗ್ ವಸ್ತುಗಳು ಇರುವುದಾಗಿ ಸಾರ್ವಜನಿಕರ ಮನವೊಲಿಸಿ ನಂಬಿಸುತ್ತಿದ್ದರು. ಇಂತಹ ಸಿಡಿಲು ಹೊಡೆದ ಪಾತ್ರೆಗಳು (ರೈಸ್ ಪುಲ್ಲಿಂಗ್) ಅಕ್ಕಿ ಕಾಳುಗಳನ್ನು ಹಾಕಿ ಸೆಳೆಯುವ ಶಕ್ತಿ ಹೊಂದಿದೆ ಎಂದು ನಂಬಿಸುತ್ತಿದ್ದರು. ಇದನ್ನ ಮಾರಾಟ ಮಾಡಿದರೆ ಕೋಟ್ಯಂತರ ರೂಪಾಯಿ ಹಣ ಸಿಗುತ್ತದೆ. ಬಂದ ಹಣದಲ್ಲಿ ನಿಮಗೂ ಪಾಲು ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದರು. ಜನರನ್ನು ನಂಬಿಸುವ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಲವು ಪೆÇೀಸ್ಟ್‍ಗಳನ್ನು ಹಾಕುತ್ತಿದ್ದರು. ಆರೋಪಿಗಳು ಹಣ ಪಡೆದ ಬಳಿಕ ಯಾವುದೇ ಪಾಲು ಹಣ ನೀಡದೆ ವಂಚಿಸುತ್ತಿದ್ದರು ಎಂದು ಪೆÇಲೀಸರು ತಿಳಿಸಿದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೆÇಲೀಸರು, ಸಿಸಿಬಿ ಎಸಿಪಿ ಜಗನ್ನಾಥ ರೈ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ವೈಯಾಲಿಕಾವಲ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.