ಸಂಚಾರ ಜಂಟಿ ಪೆÇಲೀಸ್ ಆಯುಕ್ತ ಡಾ. ಬಿ.ಆರ್. ರವಿಕಾಂತೇಗೌಡ ಅವರ ಅಭಿಮಾನಿ ಎಂದು ತನ್ನ ಬೈಕ್ ಮೇಲೆ ರವಿಕಾಂತೇಗೌಡರ ಹೆಸರು ಹಾಗೂ ್ತ ಪ್ರೆಸ್ ಎಂದು ಮುದ್ರಿಸಿಕೊಂಡು ಸಂಚಾರ ನಿಯಮ ಉಲ್ಲಂಘನೆ ಮಾಡಿಕೊಂಡು ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರನೊಬ್ಬನನ್ನು ಜಯನಗರ ಸಂಚಾರ ಠಾಣೆ ಪೆÇಲೀಸರು ವಶಕ್ಕೆ ಪಡೆದು ಬೈಕ್ ಜಪ್ತಿ ಮಾಡಿದ್ದಾರೆ.
ತ್ಯಾಗರಾಜ ನಗರದ ನಿವಾಸಿ ಪಿ. ಗಿರೀಶ್ ?ಬಾಬು (58) ಆರೋಪಿ. ಆರೋಪಿಯ ಬೈಕ್ ಜಪ್ತಿ ಮಾಡಲಾಗಿದ್ದು, ಇದುವರೆಗೂ 42 ಸಂಚಾರ ನಿಯಮ ಉಲ್ಲಂಘಿಸಿರುವವುದು ಪತ್ತೆಯಾಗಿದ್ದು, 20200 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪೆÇಲೀಸರು ತಿಳಿಸಿದರು.
ಆರೋಪಿ ಗೀರಿಶ್ ಬಾಬು ತಾನು ಆರ್‍ಟಿಐ ಕಾರ್ಯಕರ್ತ ಎಂದು ಘೋಷಿಸಿಕೊಂಡಿದ್ದ. ಕೆಲವು ಅಧಿಕಾರಿಗಳ ವಿರುದ್ಧ ದೂರು ನೀಡುವುದು ಹಾಗೂ ಸಾರ್ವಜನಿಕರಲ್ಲಿ ಪ್ರಭಾವ ಬೀರಲು ತನ್ನ ಬೈಕ್‍ನ ನಂಬರ್ ಪ್ಲೇಟ್ ಮೇಲೆ ರವಿಕಾಂತೇಗೌಡರ ಹೆಸರು , ಪ್ರೆಸ್ ಎಂದು ಮುದ್ರಿಸಿಕೊಂಡು ಓಡಾಡುತ್ತಿರುವ ಫೆÇೀಟೊಗಳು ವೈರಲ್ ಆಗಿದ್ದವು.
ಈ ಬಗ್ಗೆ ತಿಳಿದ ಜಂಟಿ ಪೆÇಲೀಸ್ ಆಯಕ್ತ ಡಾ.ಬಿ.ಆರ್. ರವಿಕಾಂತೇಗೌಡ ಆರೋಪಿಯ ಪತ್ತೆಗಾಗಿ ಜಯನಗರ ಸಂಚಾರ ಠಾಣೆ ಪೆÇಲೀಸ್ ಇನ್ಸ್‍ಪೆಕ್ಟರ್ ಪಿ.ಎನ್. ಈಶ್ವರಿ ನೇತೃತ್ವದಲ್ಲಿ ತಂಡವನ್ನು ರಚಿಸಿ ಕಾರ್ಯಾಚರಣೆಗೆ ಸೂಚಿಸಿದ್ದರು. ಈ ತಂಡ ಆರೋಪಿಯನ್ನು ಪತ್ತೆ ಮಾಡಿ, ವಾಹನ ವಶಕ್ಕೆ ಪಡೆದಿದೆ. ಯಾರಾದರೂ ಹೀಗೆ ಪೆÇಲೀಸ್ ಅಧಿಕಾರಿಗಳ ಅಥವಾ ಮಾಧ್ಯಮದ ಹೆಸರು ದುರ್ಬಳಕೆ ಮಾಡಿಕೊಂಡು ಓಡಾಡುತ್ತಿದ್ದಲ್ಲಿ ಸಂಬಂಧಪಟ್ಟ ಠಾಣೆಗೆ ತಿಳಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಂಟಿ ಆಯುಕ್ತರು ತಿಳಿಸಿದ್ದಾರೆ.
ಸದ್ಯ ಆರೋಪಿ ಪತ್ತೆಯಿಂದ ಇದುವರೆಗೂ 42 ಬಾರಿ ಸಂಚಾರ ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ. 20,200ಊ. ದಂಡ ವಿಧಿಸಿ ಬೈಕ್ ವಶಪಡಿಸಿಕೊಳ್ಳಲಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ರೀತಿ ಪೆÇಲೀಸ್ ಅಧಿಕಾರಿಗಳ ಹೆಸರನ್ನು ಅಥವಾ ಮಾಧ್ಯಮದ ಹೆಸರನ್ನು ದುರುಪಯೋಗಪಡಿಸಿಕೊಳ್ಳುವ ಮಾಹಿತಿ ಕಂಡು ಬಂದಲ್ಲಿ ಸಂಬಂಧಪಟ್ಟ ಪೆÇಲೀಸ್ ಠಾಣೆಗೆ ದೂರು ನೀಡಲು ಪೆÇಲೀಸರು ಕೋರಿದ್ದಾರೆ.