Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
32 ವರ್ಷದ ವ್ಯಕ್ತಿಯೊಬ್ಬ ತನ್ನ ಚಿಕ್ಕಮ್ಮನನ್ನು ಕೊಂದು ಆಕೆಯ ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ದೂರದ ಪ್ರದೇಶದಲ್ಲಿ ಎಸೆದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಡಿಸೆಂಬರ್ 11ರಂದು ಅನುಜ್ ಶರ್ಮಾ ದೆಹಲಿಯ ಕಾರ್ಯಕ್ರಮವೊಂದಕ್ಕೆ ಹೋಗಲು ಸಿದ್ಧನಾಗಿದ್ದ. ಆದ್ರೆ, ಅನುಜ್ನ 64 ವರ್ಷದ ಚಿಕ್ಕಮ್ಮ ಸರೋಜ್ ಅವನನ್ನು ತಡೆದಳು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೋಪದ ಭರದಲ್ಲಿ ಸರೋಜ್ಳ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ನಂತರ ಆಕೆಯ ದೇಹವನ್ನು ಮಾರ್ಬಲ್ ಕಟರ್ನಿಂದ 10 ತುಂಡುಗಳಾಗಿ ಕತ್ತರಿಸಿ ಜೈಪುರ-ಸಿಕರ್ ಹೆದ್ದಾರಿಯಲ್ಲಿ ದೂರದ ಪ್ರದೇಶದಲ್ಲಿ ಎಸೆದಿದ್ದಾನೆ. ಅನುಜ್ ದೇಹದ ಭಾಗಗಳನ್ನು ಬಕೆಟ್ ಮತ್ತು ಸೂಟ್ಕೇಸ್ನಲ್ಲಿ ಸಾಗಿಸಲಾಗಿದೆ. ನಂತರ ಸರೋಜ್ ಕಾಣೆಯಾದ ದೂರನ್ನು ಆತನೆ ದಾಖಲಿಸಿದ್ದನು. ತನಿಖೆಯ ಸಮಯದಲ್ಲಿ, ಅವನ ಹೇಳಿಕೆಗಳು ತಪ್ಪು ಎಂದು ಪೊಲೀಸರಿಗೆ ಅನುಮಾನ ಬಂದಿದೆ. ಸಿಸಿಟಿವಿ ದೃಶ್ಯಗಳಲ್ಲಿ ಅವರು ಸೂಟ್ಕೇಸ್ ಮತ್ತು ಬಕೆಟ್ನೊಂದಿಗೆ ಮನೆಯಿಂದ ಹೊರಹೋಗುತ್ತಿರುವುದು ಕಂಡುಬಂದಿದೆ. ಇದಾದ ಬಳಿಕ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.