Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೇಂದ್ರ ಸರ್ಕಾರದ ಮಧ್ಯಪ್ರವೇಶ ಬಳಿಕವೂ ಮಹಾ ಗಡಿ ವಿವಾದ ನಿಲ್ಲುವಂತೆ ಕಾಣ್ತಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆಗೂ ಡೋಂಟ್ಕೇರ್ ಎಂದಿರೋ MES ಪುಂಡರು, ಬೆಳಗಾವಿ ಅಧಿವೇಶನ ಹಿನ್ನೆಲೆಯಲ್ಲಿ ಮಹಾಮೇಳವ್ ಆಯೋಜಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರೋ ಸಿಎಂ ಬಸವರಾಜ ಬೊಮ್ಮಾಯಿ, ಎಂಇಎಸ್ ಪುಂಡರನ್ನು ಯಾವ ರೀತಿ ಹದ್ದುಬಸ್ತಿನಲ್ಲಿ ಇಡಬೇಕು ನಮಗೆ ಗೊತ್ತಿದೆ.. ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಖಡಕ್ ವಾರ್ನಿಂಗ್ ನೀಡಿದ್ಧಾರೆ.. ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ, ಎಂಇಎಸ್ ಪುಂಡಾಟ ಇದೇ ಮೊದಲಲ್ಲ.. ಕಳೆದ 50 ವರ್ಷದಿಂದ ಎಂಇಎಸ್ ಪುಂಡಾಟ ಮಾಡುತ್ತಲೇ ಬಂದಿದೆ ಎಂದಿದ್ದಾರೆ. ಇನ್ನು, ಮಂಗಳೂರು ಕುಕ್ಕರ್ ಬ್ಲಾಸ್ಟ್ ತನಿಖೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಡಿಕೆಶಿ ವಿರುದ್ಧ ಸಿಎಂ ಬೊಮ್ಮಾಯಿ ಕಿಡಿಕಾರಿದ್ದಾರೆ.