ಎಂಭತ್ತೈದನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಗಮನ ಸೆಳೆದಿದೆ “ರಂಗೋಲಿ”.
ಎಂಭತ್ತೈದನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಾಣ ಕಾರ್ಯಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಹಳದಿ ಮತ್ತು ಕೆಂಪು ಬಣ್ಣದಲ್ಲಿ ಸಾಹಿತ್ಯ ಸಮ್ಮೇಳನದ ಬರಹವುಳ್ಳ ಬಿಡಿಸಿದ ರಂಗೋಲಿ ಕಳೆ ತಂದಿದಲ್ಲದೆ ಎಲ್ಲರ ಗಮನ ಸೆಳೆಯಿತು.
ಸಮ್ಮೇಳನದ ಪ್ರಚಾರ ಸಮಿತಿ ವತಿಯಿಂದ 60*170 ಅಡಿ ಆಗಲದ "85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ"ದ ಬರಹವುಳ್ಳ ರಂಗೋಲಿ ಬರೆಸಲಾಗಿದೆ. ಕಲಬುರಗಿಯ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆಯ ಪರಶುರಾಮ ನಿರ್ದೇಶನದಲ್ಲಿ ಕಲಾವಿದರು ರಂಗು ತುಂಬಿದ್ದರು.
ಇದನ್ನು ದ್ರೋಣ್ ಕ್ಯಾಮೆರಾದಿಂದ ದೃಶ್ಯಗಳನ್ನು ಸೆರೆ ಹಿಡಿಯಲಾಗಿದ್ದು, ತುಂಬಾ ಆಕರ್ಷಕವಾಗಿ ಚಿತ್ರಗಳು ಲಭ್ಯವಾಗಿವೆ.