ವಿಶ್ವದೆಲ್ಲೆಡೆ ಒಮಿಕ್ರಾನ್ ಭೀತಿ ಹೆಚ್ಚಿದ್ದು, ಇದೀಗ ಇನ್ನೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಒಮಿಕ್ರಾನ್‌ನಿಂದ ಏಪ್ರಿಲ್ ಅಂತ್ಯಕ್ಕೆ 75 ಸಾವಿರ ಜನ ಮೃತಪಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಒಮಿಕ್ರಾನ್ ಸೋಂಕು ಪ್ರಸರಣಕ್ಕೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಬ್ರಿಟನ್‌ನಲ್ಲಿ ಮುಂದಿನ ವರ್ಷ ಏಪ್ರಿಲ್ ವೇಳೆಗೆ 75 ಸಾವಿರ ಮಂದಿ ಸಾವಿಗೀಡಾಗಲಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಲಂಡನ್ ಸ್ಕೂಲ್ ಆಫ್ ಹೈಜಿನ್ ಆಂಡ್ ಟ್ರಾಪಿಕಲ್ ಮೆಡಿಸಿನ್‌ನ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದಾರೆ.
ಸೋಂಕಿಗೆ ತುತ್ತಾಗುವವರು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಶೀಘ್ರದಲ್ಲೇ ಗಣನೀಯ ಏರಿಕೆ ಕಾಣಲಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಯಾವುದೇ ಕ್ರಮಗಳನ್ನು ಕೈಗೊಳ್ಳದಿದ್ದರೆ ದಿನಕ್ಕೆ ಎರಡು ಸಾವಿರಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗುತ್ತವೆ ಎನ್ನಲಾಗಿದೆ. ಡಿಸೆಂಬರ್ 1, 2021 ಮತ್ತು ಏಪ್ರಿಲ್ 30, 2022 ರ ನಡುವೆ 175,000 ಆಸ್ಪತ್ರೆಗಳು ಮತ್ತು 24,700 ಸಾವುಗಳು ಸಂಭವಿಸಬಹುದು.