Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡೆಲ್ಟಾಕ್ಕಿಂತ ವೇಗವಾಗಿ ಹರಡುತ್ತೆ ಒಮಿಕ್ರಾನ್: ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು..?

ಡೆಲ್ಟಾಕ್ಕಿಂತ ವೇಗವಾಗಿ ಹರಡುತ್ತೆ ಒಮಿಕ್ರಾನ್: ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು..?
bangalore , ಸೋಮವಾರ, 13 ಡಿಸೆಂಬರ್ 2021 (20:09 IST)
ಒಮಿಕ್ರಾನ್ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದೀಗ ಒಟ್ಟಾರೆ 63 ದೇಶಗಳಲ್ಲಿ ಸೋಂಕು ಕಾಣಿಸಿದೆ. ಈ ತಳಿ ಡೆಲ್ಟಾದಷ್ಟು ಮಾರಕ ಅಲ್ಲವಾದರೂ ಅದಕ್ಕಿಂತ ಹೆಚ್ಚು ವೇಗದಲ್ಲಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಕೊರೋನಾ ಸೋಂಕಿನಿಂದ ಬಚಾವ್ ಆಗಲು ಈಗಾಗಲೇ ಹಾಕಿಸಿರುವ ಲಸಿಕೆಯ ದಕ್ಷತೆಯನ್ನು ಒಮಿಕ್ರಾನ್ ಕಡಿಮೆ ಮಾಡುತ್ತದೆ. ಡೆಲ್ಟಾ ಅತಿ ವೇಗವಾಗಿ ಹರಡುತ್ತದೆ ಎನ್ನುವ ಭೀತಿ ಇತ್ತು, ಆದರೆ ಒಮಿಕ್ರಾನ್ ಡೆಲ್ಟಾ ಮೀರಿಸಿ ವೇಗದಲ್ಲಿ ಹರಡುತ್ತದೆ ಎಂದು ಹೇಳಿದೆ.ಒಮಿಕ್ರಾನ್ ಲಸಿಕೆ ದಕ್ಷತೆ ಕಡಿಮೆ ಮಾಡುತ್ತದೆ. ಆದರೆ ಇದರ ಲಕ್ಷಣಗಳು ಅಷ್ಟೊಂದು ಗಂಭೀರವಾಗಿಲ್ಲ. ಕೆಲವರಿಗೆ ಸೌಮ್ಯ ಲಕ್ಷಣಗಳು ಕಾಣಿಸಿದರೆ, ಹಲವರಿಗೆ ಲಕ್ಷಣಗಳೇ ಕಾಣಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
63 ದೇಶಗಳಲ್ಲಿ ಒಮಿಕ್ರಾನ್ ಕಾಣಿಸಿದ್ದರೂ ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್‌ನಲ್ಲಿ ಸೋಂಕು ಅತಿ ವೇಗದಲ್ಲಿ ಹರಡುತ್ತಿದೆ ಎಂದು ಹೇಳಿದೆ. ಭಾರತದಲ್ಲಿ ಎಲ್ಲ ವಯೋಮಾನದವರಲ್ಲಿ ಸೋಂಕು ಕಾಣಿಸುತ್ತಿದೆ. ಆದರೆ ಯಾವುದೇ ಗಂಭೀರ ಲಕ್ಷಣಗಳು ಇಲ್ಲ. ಹೆಚ್ಚಿನ ರೋಗಿಗಳು ವಾರದೊಳಗೆ ಚೇತರಿಕೆ ಕಂಡಿದ್ದಾರೆ ಎಂದು ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

21 ವರ್ಷಗಳ ನಂತರ ಭಾರತಕ್ಕೆ ‘ವಿಶ್ವ ಸುಂದರಿ’ ಪಟ್ಟ: ಹರ್ನಾಜ್ ಸಂಧು ಮಿಸ್ ಯೂನಿವರ್ಸ್