ಆಟೊ, ಕ್ಯಾಬ್‌ಗಳ ಚಾಲಕರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ವತಿಯಿಂದಲೇ ಹೊಸ ಆ್ಯಪ್ ರೂಪಿಸಲು ಸಿದ್ಧತೆ ನಡೆದಿದೆ. ಈ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಲಾಭ ಮತ್ತು ನಷ್ಟ ಇಲ್ಲದ ಪರಿಕಲ್ಪನೆಯಲ್ಲಿ ಈ ಆ್ಯಪ್ ಅನ್ನು ಪರಿಚಯಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಕೆಲವೇ ತಿಂಗಳಲ್ಲಿ ಹೊಸ ಆ್ಯಪ್‌ನ ಪ್ರಾಥಮಿಕ ಪ್ರಯೋಗಕ್ಕೆ ಚಾಲನೆ ದೊರೆಯಲಿದೆ. ನಂತರ ಇತರ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು. ಹೊಸ ಆ್ಯಪ್‌ನಲ್ಲಿ ದರ ನಿಗದಿಪಡಿಸುವ ಬಗ್ಗೆ ಇನ್ನೂ ಯೋಚಿಸಿಲ್ಲ. ಆ್ಯಪ್ ಆಧಾರಿತ ಸಾರಿಗೆ ಸೇವೆ ನೀಡುತ್ತಿರುವ ಕೆಲವು ಖಾಸಗಿ ಸಂಸ್ಥೆಗಳು ಆಟೊ ಮತ್ತು ಕ್ಯಾಬ್ ಚಾಲಕರಿಗೆ ಕಡಿಮೆ ಹಣ ನೀಡಿ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಈ ಕ್ರಮಕೈಗೊಂಡಿದೆ ಎಂದು ವಿವರಿಸಿದರು. ಸಾರಿಗೆ ಇಲಾಖೆಯ ಆ್ಯಪ್ ಅಧಾರಿತ ಸೇವೆಗೆ ನೋಂದಣಿ ಮಾಡಿಕೊಳ್ಳಬೇಕು. ಓಲಾ, ಉಬರ್‌ಗಿಂತಲೂ ಚಾಲಕರು ಹೆಚ್ಚಿನ ಲಾಭಗಳಿಸಬಹುದು. ಇಲ್ಲಿ ಯಾವುದೇ ಕಿರುಕುಳ ಇರುವುದಿಲ್ಲ. ಸಾರ್ವಜನಿಕರು ಮತ್ತು ಚಾಲಕರ ಹಿತದೃಷ್ಟಿ ಕೇಂದ್ರೀಕರಿಸಿದ ಆ್ಯಪ್ ಇದಾಗಿದೆ' ಎಂದು ವಿವರಿಸಿದರು.