Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೃತ ಪ್ರೊಬೆಷನರಿ ಪಿಎಸ್ಐ ಕುಟುಂಬಕ್ಕೆ 59 ಲಕ್ಷ ನೆರವು: ಮಾನವೀಯತೆ ಮೆರೆದ ಪ್ರಶಿಕ್ಷಣಾರ್ಥಿಗಳು

ಮೃತ ಪ್ರೊಬೆಷನರಿ ಪಿಎಸ್ಐ ಕುಟುಂಬಕ್ಕೆ 59 ಲಕ್ಷ ನೆರವು: ಮಾನವೀಯತೆ ಮೆರೆದ ಪ್ರಶಿಕ್ಷಣಾರ್ಥಿಗಳು
ಕಲಬುರಗಿ , ಸೋಮವಾರ, 7 ಜನವರಿ 2019 (19:33 IST)
ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಪ್ರೊಬೆಷನರಿ ಪಿಎಸ್ಐ ಬಸವರಾಜ ಶಂಕ್ರೆಪ್ಪ ಮಂಚಣ್ಣನವರ್ ಕುಟುಂಬಕ್ಕೆ ಪೊಲೀಸ್ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳು ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಕಲಬುರಗಿ ನಗರದ ರಾಮ ಮಂದಿರ ವೃತ್ತದಲ್ಲಿರುವ ಗ್ರ್ಯಾಂಡ್ ಸೆಂಟ್ರಲ್ ಕಾಂಪ್ಲೆಕ್ಸ್ ಎದುರು ಭಾನುವಾರ ಬೆಳಿಗ್ಗೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಪ್ರೊಬೆಷನರಿ ಪಿಎಸ್ಐ ಬಸವರಾಜ ಶಂಕ್ರೆಪ್ಪ ಮಂಚಣ್ಣನವರ್ (30) ಕುಟುಂಬಕ್ಕೆ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಪಿಎಸ್ಐ ತರಬೇತಿ ಪಡೆಯುತ್ತಿರುವ 590 ಜನ ಪ್ರಶಿಕ್ಷಣಾರ್ಥಿಗಳು ತಲಾ 10 ಸಾವಿರ ರೂಪಾಯಿಯಂತೆ ಸಂಗ್ರಹಿಸಿ 59 ಲಕ್ಷ ರೂಪಾಯಿ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಬಡತನದಲ್ಲಿ ಛವ ಬಿಡದೆ ಓದಿ ಪಿಎಸ್ಐ ಹುದ್ದೆಗೆ ಏರಿದ್ದ ಜಿಲ್ಲೆಯ ಸೇಡಂ ತಾಲ್ಲೂಕಿನ ಬೆನಕನಹಳ್ಳಿಯ ಬಸವರಾಜ ಮಂಚಣ್ಣನವರ್ ಅವರ ಅಸಹಜ ಸಾವಿಗೆ ಕಂಬನಿ ಮಿಡಿದ ಸಹಪಾಠಿ ಪ್ರಶಿಕ್ಷಣಾರ್ಥಿಗಳು ಸರ್ಕಾರ ಮತ್ತು ಬೇರೆ ಯಾವ ನೆರವಿಗೂ ಕಾಯದೇ ತಾವೇ ಸ್ವತಃ ತಲಾ 10 ಸಾವಿರ ರೂಪಾಯಿಗಳನ್ನು ಸಂಗ್ರಹಿಸಿ ಮಂಚಣ್ಣನವರ್ ಕುಟುಂಬದವರಿಗೆ ನೀಡಿದ್ದಾರೆ.

 ಸ್ವಗ್ರಾಮದಲ್ಲಿ ಮಡುಗಟ್ಟಿದ ಶೋಕ: ಪ್ರೊಬೆಷನರಿ ಪಿಎಸ್ಐ ಮಂಚಣ್ಣನವರ್ ಅನುಮಾನಾಸ್ಪದ ಸಾವು ಅವರ ಕುಟುಂಬಕ್ಕೆ ಬರಸಿಡಿಲೇ ಬಡಿದಂತಾಗಿದ್ದು, ಸಾವಿನ ಸುದ್ದಿ ಕೇಳಿ ಗ್ರಾಮಸ್ಥರ ದು:ಖದ ಕಟ್ಟೆ ಒಡೆದು ಹೋಗಿದೆ. ಬೆನಕನಹಳ್ಳಿ ಗ್ರಾಮದಲೀಗ ಶೋಕ ಮಡುಗಟ್ಟಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ತೆರಿಗೆ ವಂಚನೆ: ವಿಚಾರಣೆಗೆ ಹಾಜರಾಗುವಂತೆ ನಟರಿಗೆ ನೋಟೀಸ್ !