Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಫಘಾನಿಸ್ತಾನದಲ್ಲಿ ಚಿನ್ನದ ಗಣಿ ಕುಸಿದು 30 ಜನ ಸಾವು

ಅಫಘಾನಿಸ್ತಾನದಲ್ಲಿ ಚಿನ್ನದ ಗಣಿ ಕುಸಿದು 30 ಜನ ಸಾವು
ಅಫಘಾನಿಸ್ತಾನ್ , ಸೋಮವಾರ, 7 ಜನವರಿ 2019 (07:24 IST)
ಅಫಘಾನಿಸ್ತಾನ : ಭಾನುವಾರ ಅಫಘಾನಿಸ್ತಾನದ  ಬದಖಷಾನ ಪ್ರಾಂತ್ಯದ ಕೊಹಿಸ್ತಾನ್‌ ಜಿಲ್ಲೆಯ ಚಿನ್ನದ ಗಣಿ ಕುಸಿದು 30 ಜನ ಮೃತಪಟ್ಟಿದ್ದು, 15 ಜನ ಗಾಯಗೊಂಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.


ಅಲ್ಲಿನ ಗ್ರಾಮಸ್ಥರು ನದಿ ತೀರದ ಉದ್ದಕ್ಕೂ ಸುಮಾರು 200 ಅಡಿ ಆಳದ ವರೆಗೆ ಅಗೆದು  ಚಿನ್ನ ಹುಡುಕುವ ಸಲುವಾಗಿ ಗಣಿ ಒಳಗೆ ಇಳಿದಿದ್ದಾರೆ. ಆ ವೇಳೆ ಮಣ್ಣು ಕುಸಿದು ಈ ಅವಘಡ ನಡೆದಿದೆ.


ಆದರೆ ಈ ಗ್ರಾಮಸ್ಥರು ವೃತ್ತಿರಪ ಗಣಿ ಕೆಲಸಗಾರರಲ್ಲ. ಅವರು ದಶಕಗಳಿಂದ ಸರ್ಕಾರದ ನಿಯಂತ್ರಣವಿಲ್ಲದೆ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಪ್ರಾಂತೀಯ ಗವರ್ನರ್‌ ವಕ್ತಾರ ನಿಕ್‌ ಮೊಹಮ್ಮದ್‌ ನಝೀರ್‌ ಹೇಳಿದ್ದಾರೆ.


ಅವಘಡ ಸಂಭವಿಸಿದ ಸ್ಥಳಕ್ಕೆ ರಕ್ಷಣಾ ತಂಡವನ್ನು ಕಳುಹಿಸಲಾಗಿದೆ. ಆದರೆ ಸ್ಥಳೀಯರು ಆಗಲೇ ಕುಸಿದಿರುವ ಮಣ್ಣು ತೆರವು ಕಾರ್ಯದಲ್ಲಿ ತೊಡಿಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಬಸ್ ಕಂಡಕ್ಟರ್ ನಿಂದಲೇ ಲೈಂಗಿಕ ಕಿರುಕುಳ