Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕಳೆದ ಕೆಲ ವರ್ಷಗಳಿಂದ ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದ ನಟಿ ಶರಣ್ಯ ಶಶಿ ಅನೇಕ ಸಲ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್ದಾರೆ. ಇವರ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ.
2012ರಲ್ಲಿ ಬ್ರೈನ್ ಟ್ಯೂಮರ್ಗೆ ಒಳಗಾಗಿದ್ದ ನಟಿಗೆ ಇಲ್ಲಿಯವರೆಗೆ ಒಟ್ಟು 11 ಶಸ್ತ್ರಚಿಕಿತ್ಸೆಗಳಾಗಿದ್ದವು. ಕೋವಿಡ್ ಸೋಂಕಿಗೊಳಗಾದ ಬಳಿಕ ಚೇತರಿಸಿಕೊಂಡಿದ್ದ ಅವರಿಗೆ ಮತ್ತೆ ಅನಾರೋಗ್ಯದ ತೊಂದರೆ ಆರಂಭಗೊಂಡಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಮಲಯಾಳಂನ ಚಕ್ಕೋರಂದಮನ್ ಮತ್ತು ಚೋಟಾ ಮುಂಬೈ ಚಿತ್ರಗಳಲ್ಲಿ ನಟನೆ ಮಾಡಿದ್ದಳು. ಇದರ ಜೊತೆಗೆ ಅನೇಕ ಟಿವಿ ಧಾರಾವಾಹಿಗಳಲ್ಲಿ ಇವರು ನಟನೆ ಮಾಡಿ, ಜನಪ್ರಿಯರಾಗಿದ್ದರು.
ನಟಿ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಹಾಗೂ ಸಾವಿನ ನೋವು ತಡೆದುಕೊಳ್ಳುವ ಶಕ್ತಿಯನ್ನ ದೇವರು ಅವರ ಕುಟುಂಬಕ್ಕೆ ನೀಡಲಿ. ಟ್ಯೂಮರ್ನಿಂದ ಬಳಲುತ್ತಿದ್ದ ನಟಿ ಅನೇಕ ಜನರಿಗೆ ಸ್ಫೂರ್ತಿಯಾಗಿದ್ದರು ಎಂದು ಇದೇ ವೇಳೆ ನೆನಪಿಸಿಕೊಂಡಿದ್ದಾರೆ.
ಶರಣ್ಯ ಮಲಯಾಳಂನ ಕಿರುತೆರೆಯಲ್ಲಿ ಅಪಾರ ಪ್ರಮಾಣದ ಅಭಿಮಾನ ಬಳಗ ಹೊಂದಿದ್ದಾಳೆ. ಮಂತರಕೋಡಿ, ಸೀತಾ ಹಾಗೂ ಹರಿಚಂದ್ರನಮ್ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟನೆ ಮಾಡಿದ್ದು, ಕೆಲವೊಂದು ಸಿನಿಮಾಗಳಲ್ಲಿ ಸಹಾಯಕ ಪಾತ್ರ ಸಹ ನಿರ್ವಹಿಸಿದ್ದಾರೆ.