Publish Date: Sat, 09 May 2020 (22:56 IST)
Updated Date: Sat, 09 May 2020 (22:57 IST)
ಕೋವಿಡ್-19 ದಿಂದ ಗುಣಮುಖರಾದ 31 ಜನರನ್ನು ಈವರೆಗೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ವಿಜಯಪುರದಲ್ಲಿ ಆರು ಜನರು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಹೊಂದಿದ್ದು, ಈವರೆಗೆ ಒಟ್ಟು 31 ಕೋವಿಡ್-19 ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
50 ವರ್ಷದ ಮಹಿಳೆ ರೋಗಿ ಸಂಖ್ಯೆ 397, 28 ವರ್ಷದ ಪುರುಷ ರೋಗಿ ಸಂಖ್ಯೆ 402, 14 ವರ್ಷದ ಗಂಡು ಮಗು ರೋಗಿ ಸಂಖ್ಯೆ 407, 18 ವರ್ಷದ ಯುವತಿ ರೋಗಿ ಸಂಖ್ಯೆ 410, 27 ವರ್ಷದ ಯುವಕ ರೋಗಿ ಸಂಖ್ಯೆ -467 ಹಾಗೂ 27 ವರ್ಷದ ಯುವಕ ರೋಗಿ ಸಂಖ್ಯೆ 511 ಇವರು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಈವರೆಗೆ ಮೂರು ಜನರು ಕೋವಿಡ್-19 ದಿಂದ ಸಾವನ್ನಪ್ಪಿದ್ದಾರೆ.
Jagadeesh
Publish Date: Sat, 09 May 2020 (22:56 IST)
Updated Date: Sat, 09 May 2020 (22:57 IST)