ಕೊರೊನಾ ವೈರಸ್ ತಡೆಗೆ ರಾಜ್ಯದಲ್ಲಿ ಜ್ವರ ತಪಾಸಣಾ ಕೇಂದ್ರಗಳು ಸಕ್ರಿಯಗೊಂಡಿವೆ.
ರಾಜ್ಯದಲ್ಲಿ 350 ಜ್ಚರ ತಪಾಸಣಾ ಕೇಂದ್ರಗಳು ಕೋವಿಡ್ ನಿಯಂತ್ರಣದಲ್ಲಿ ಸಕ್ರಿಯಗೊಂಡಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಯಾವುದೇ ವೈರಾಣುವಿನಿಂದ ಮನುಕುಲವನ್ನು ನಾಶ ಮಾಡಲು ಸಾಧ್ಯವಾಗಿಲ್ಲ. ಇದೀಗ ಕಂಡು ಬಂದಿರುವ ಕೊರೋನಾ ವೈರಸ್ ಏನೂ ಮಾಡಲು ಸಾಧ್ಯವಿಲ್ಲ. ಇದರೊಂದಿಗೆ ಸಹಬಾಳ್ವೆ ರೂಢಿಸಿಕೊಳ್ಳುವಷ್ಟು ರೋಗನಿರೋಧಕ ಶಕ್ತಿ ಮನುಷ್ಯರಲ್ಲಿ ಬೆಳೆಯುತ್ತದೆ ಎಂದರು.
ಜಗತ್ತನ್ನು ಕಾಡುತ್ತಿರುವ ಕೊರೋನಾ ವೈರಾಣು ಸೋಂಕಿನ ವಿರುದ್ಧ ನಾವು ಗೆಲುವು ಸಾಧಿಸುತ್ತೇವೆ ಎನ್ನುವ ವಿಶ್ವಾಸವಿದೆ ಎಂದರು.
ದೇಶದಲ್ಲಿ ಈ ಸೋಂಕಿನಿಂದ ಸಾವಿನ ಪ್ರಮಾಣ ತುಂಬಾ ಕಡಿಮೆ ಇದೆ. ರಾಜ್ಯದಲ್ಲಿ ಇನ್ನೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡುವ ಅಗತ್ಯವಿದೆ ಎಂದಿದ್ದಾರೆ.