Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತುಂಗಭದ್ರಾ ಜಲಾಶಯದಿಂದ 3,987 ಕ್ಯುಸೆಕ್ ನೀರು ಬಿಡುಗಡೆ ಬೆನ್ನಲ್ಲೇ ಜನರಿಗೆ ಅಧಿಕಾರಿಗಳ ಮನವಿ

ತುಂಗಭದ್ರಾ ಜಲಾಶಯದಿಂದ 3,987 ಕ್ಯುಸೆಕ್ ನೀರು ಬಿಡುಗಡೆ ಬೆನ್ನಲ್ಲೇ ಜನರಿಗೆ ಅಧಿಕಾರಿಗಳ ಮನವಿ

Sampriya

ಹೊಸಪೇಟೆ , ಸೋಮವಾರ, 22 ಜುಲೈ 2024 (19:03 IST)
Photo Courtesy X
ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆ ಭರ್ತಿಗೆ ಐದು ಅಡಿಯಷ್ಟೇ ಬಾಕಿಯಿರುವಾಗ ಇದೀಗ ಮೂರು ಕ್ರಸ್ಟ್‌ಗೇಟ್‌ಗಳನ್ನು ಒಂದು ಅಡಿಯಷ್ಟು ಎತ್ತರಕ್ಕೆ ತೆರೆದು 3,987 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ.

ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ 50 ಸಾವಿರ ಕ್ಯುಸೆಕ್ ತನಕ ನದಿಗೆ ನೀರು ಹರಿಸುವ ಸಾಧ್ಯತೆಯಿದೆ ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.

ಇನ್ನೆರಡು ಮೂರು ದಿನಗಳೊಳಗೆ ಜಲಾಶಯ ಭರ್ತಿಯಾಗುವ ಸಾಧ್ಯತೆ ಇರುವ ಕಾರಣ ಜುಲೈ 24ರಂದು ಅಣೆಕಟ್ಟೆಯ ಎಲ್ಲಾ 33 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುವುದು ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.

ಇನ್ನೂ ಮುನ್ನೆಚ್ಚರಿಕ ಕ್ರಮವಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಬಹುದು, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಶತ್ರುಘ್ನ ಸಿನ್ಹಾ