Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಸಾಮಾನ್ಯ ಆಟೋದಲ್ಲಿ ಪ್ರಯಾಣಿಸೋ ವೇಳೆ ನಾವು ಇಬ್ಬರು ಅಥವಾ ಮೂವರು ಪ್ರಯಾಣಿಕರನ್ನು ಕಾಣುತ್ತೇವೆ. ಆದರೆ ಇಲ್ಲೋಬ್ಬ ಆಟೋ ಚಾಲಕ ಬರೋಬ್ಬರಿ 27 ಮಂದಿಯನ್ನು ತನ್ನ ಆಟೋದಲ್ಲಿ ತುಂಬಿಸಿಕೊಂಡು ಸಂಚಾರ ಮಾಡ್ತಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಯುಪಿಯ ಫತೇಪುರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಬಕ್ರೀದ್ ಹಿನ್ನೆಯಲ್ಲಿ ನಮಾಜ್ ಮಾಡಲು ಕೆಲವರು ಆಟೋದಲ್ಲಿ ಬಿಂಡ್ಕಿಗೆ ಬಂದಿದ್ದರು. ಆದರೆ 6 ಸೀಟ್ ಸಾಮಾರ್ಥ್ಯದ ಆಟೋದಲ್ಲಿ ಬರೋಬ್ಬರಿ 27 ಮಂದಿಯನ್ನು ತುಂಬಿಸಿಕೊಂಡು ಆಟೋ ಚಾಲಕ ಬಂದಿದ್ದಾನೆ. ಆಟೋದಲ್ಲಿ ಎಲ್ಲಾ ಪ್ರಯಾಣಿಕರು ಮಹಾರಾಷ್ಟ್ರದವರು ಎಂಬ ಮಾಹಿತಿ ಲಭ್ಯವಾಗಿದೆ. ಆಟೋ ಚಾಲಕ ಹೈ ಸ್ಪೀಡ್ನಲ್ಲಿ ತೆರಳುತ್ತಿದ್ದ ವೇಳೆ ಅನುಮಾನಗೊಂಡ ಪೊಲೀಸರು ಆಟೋವನ್ನು ತಡೆದು ನಿಲ್ಲಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ.