ವಿಶ್ವ ಜನಸಂಖ್ಯಾ ದಿನವನ್ನು ಪ್ರತಿ ವರ್ಷ ಜುಲೈ 11 ರಂದು ಆಚರಿಸಲಾಗುತ್ತದೆ. ಜನಸಂಖ್ಯಾ ದಿನವನ್ನು ಆಚರಿಸುವ ಉದ್ದೇಶವು ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು, ಇದರಿಂದ ಪ್ರತಿಯೊಬ್ಬ ವ್ಯಕ್ತಿಯು ಮೂಲಭೂತ ಸೌಲಭ್ಯಗಳನ್ನು ಪಡೆಯಬಹುದು.
ಚೀನಾ ಮತ್ತು ಭಾರತದಂತಹ ದೇಶಗಳು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ. ಇವೆರಡೂ ಸುಮಾರು 3 ಬಿಲಿಯನ್ ಜನಸಂಖ್ಯೆಯನ್ನು ಹೊಂದಿವೆ. ಆದರೆ ಜನಸಂಖ್ಯೆ ಮತ್ತು ವಿಸ್ತೀರ್ಣ ಬಹಳ ಚಿಕ್ಕದಾಗಿರುವ ದೇಶದ ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ ಸೀಲ್ಯಾಂಡ್ ವಿಶ್ವದ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಈ ದೇಶವು ಉತ್ತರ ಸಮುದ್ರದಲ್ಲಿದೆ, ಇಂಗ್ಲೆಂಡ್‌ನಿಂದ ಸುಮಾರು 7.5 ಮೈಲಿ ದೂರದಲ್ಲಿದೆ. ಸೀಲ್ಯಾಂಡ್ ನ ಮೇಲ್ಮೈ ವಿಸ್ತೀರ್ಣ 6 ಸಾವಿರ ಚದರ ಅಡಿಗಳಷ್ಟು ಹರಡಿದೆ.