Publish Date: Sat, 14 Sep 2019 (19:26 IST)
Updated Date: Sat, 14 Sep 2019 (19:28 IST)
ಮೈತ್ರಿ ಪಕ್ಷಗಳಿಂದ 17 ಶಾಸಕರು ರಾಜೀನಾಮೆ ನೀಡಿ ಈಗಾಗಲೇ ಅನರ್ಹಗೊಂಡಿದ್ದರೆ, ಇತ್ತ ಜೆಡಿಎಸ್ ನಿಂದ ಮತ್ತೆ 20 ಶಾಸಕರು ರಾಜೀನಾಮೆ ನೀಡಲಿದ್ದಾರೆ.
ಹೀಗಂತ ಜೆಡಿಎಸ್ ರೆಬಲ್ ಎಂಎಲ್ ಎ ನಾರಾಯಣಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಹೆಚ್.ಡಿ.ರೇವಣ್ಣ ಅವರ ಕಾರಣದಿಂದಲೇ ಬಹುತೇಕ ಶಾಸಕರು ಈ ರೀತಿಯ ತೀರ್ಮಾನಕ್ಕೆ ಬಂದಿದ್ದಾರೆ. ಯಾರು ಯಾರು ರಾಜೀನಾಮೆ ನೀಡ್ತಾರೆ ಅನ್ನೋದನ್ನು ಈಗಲೇ ಹೇಳಲ್ಲ ಅಂದಿದ್ದಾರೆ.
20ಕ್ಕೂ ಹೆಚ್ಚು ಶಾಸಕರು ಜೆಡಿಎಸ್ ನಿಂದ ರಾಜೀನಾಮೆ ನೀಡಿ ಹೊರಬರಲು ಸಿದ್ಧತೆ ನಡೆಸಿದ್ದಾರೆ. ದೋಸ್ತಿ ಸರಕಾರ ಕೊನೆಗಾಣಲು ರೇವಣ್ಣ ಕಾರಣ ಅಂತ ಹರಿಹಾಯ್ದರು.
Jagadeesh
Publish Date: Sat, 14 Sep 2019 (19:26 IST)
Updated Date: Sat, 14 Sep 2019 (19:28 IST)