ರಾಜ್ಯದಲ್ಲಿ 108 ತುರ್ತು ಸೇವೆಯಲ್ಲಿ ಸಮಸ್ಯೆ ಆಗುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 108 ತುರ್ತು ಆ್ಯಂಬುಲೆನ್ಸ್ ಸೇವೆ 2006-07ರಲ್ಲಿ ಪ್ರಾರಂಭ ಮಾಡಲಾಗಿತ್ತು. ಆಗ ಅದರ ನಿರ್ವಹಣೆಯನ್ನು ಟೆಂಡರ್ ಮೂಲಕ ನೀಡಲಾಗ್ತಿರಲಿಲ್ಲ. ನಂತರ ಟೆಂಡರ್ನಲ್ಲಿ ನಿರ್ವಹಣೆ ಆರಂಭಿಸಲಾಗಿದ್ದು, ಸತ್ಯಂ ಅನ್ನುವ ಸಂಸ್ಥೆಗೆ ನಿರ್ವಹಣೆ ಜಬಾಬ್ದಾರಿ ನೀಡಲಾಗಿತ್ತು. ಆಗ ಯಾವುದೇ ಸಮಸ್ಯೆ ಇರಲಿಲ್ಲ. ನಂತರ J.V.K ಸಂಸ್ಥೆಗೆ ನಿರ್ವಹಣೆಗೆ ನೀಡಲಾಗಿದೆ. ಇದೀಗ ಇತ್ತೀಚೆಗೆ ಸಮಸ್ಯೆಯಾಗ್ತಿದ್ದು, ಈ ಸಂಸ್ಥೆ ಸರಿಯಾಗಿ ಸೇವೆ ನೀಡ್ತಿಲ್ಲ ಎಂದು ಹೇಳಿದ್ರು.
ಮುಂದುವರೆದ ದೇಶದಲ್ಲಿ ಯಾವ ರೀತಿ ಆ್ಯಂಬುಲೆನ್ಸ್ ಸೇವೆ ವ್ಯವಸ್ಥೆ ಇದೆ. ಆ ರೀತಿ ಸೇವೆ ನೀಡುವುದು ಹೇಗೆ ಎಂದು ವರದಿ ನೀಡಲು ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ನೀಡಿದ ವರದಿಯ ಆಧಾರದ ಮೇಲೆ ಟೆಂಡರ್ ಕರೆಯಲಾಗಿದೆ. ಮುಂದೆ ಇಂತಹ ಸಮಸ್ಯೆ ಆಗದಂತೆ ಮಾದರಿ ತುರ್ತು ಅಂಬ್ಯುಲೆನ್ಸ್ ಸೇವೆ ರಾಜ್ಯದಲ್ಲಿ ನೀಡಲಾಗುವುದು. 2 ತಿಂಗಳಲ್ಲಿ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ತಿಳಿಸಿದ್ರು.